ಮಡಿಕೇರಿ ಡಿ.26 : ಮನೆಯ ಮಾಲೀಕನನ್ನು
ಕಟ್ಟಿ ಹಾಕಿ ನಗದು ಹಾಗೂ ಚಿನ್ನಾಭರಣ
ದೋಚಿರುವ ಘಟನೆ ಸಿದ್ದಾಪುರ ಸಮೀಪದ
ಅವರೆಗುಂದ ಗ್ರಾಮದಲ್ಲಿ ನಡೆದಿದೆ.
ನಾಲ್ವರು ಅಪರಿಚಿತ ವ್ಯಕ್ತಿಗಳು ಮನೆಯೊಳಗೆ
ನುಗ್ಗಿ ಒಬ್ಬಂಟಿಯಾಗಿದ್ದ ಮಾಲೀಕ ಎಂ.ಎಂ
ಚಂಗಪ್ಪ ಅವರನ್ನು ಕಟ್ಟಿ ಹಾಕಿ ನಗದು ಮತ್ತು
ಚಿನ್ನಾಭರಣ ಕದ್ದೊಯ್ದಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಎಂ.ಎ.ಅಯ್ಯಪ್ಪ, ಸಿದ್ದಾಪುರ ಪೊಲೀಸರು,
ಶ್ವಾನದಳ, ಬೆರಳಚ್ಚು ಸಿಬ್ಬಂದಿಗಳು ಭೇಟಿ
ನೀಡಿ ಪರಿಶೀಲಿಸಿದರು. ಚೋರರ ಪತ್ತೆ
ಕಾರ್ಯಾಚರಣೆ ಚುರುಕುಗೊಂಡಿದೆ