ಕೆವಿಜಿ ವಿಧ್ಯಾ ಸಂಸ್ಥೆಯಲ್ಲಿ ಮುಂದುವರಿದ ಅಕಾಡೆಮಿ ಗೊಂದಲ:ಸಮಾಜದ ಹಿರಿಯ ಸ್ವಾಮೀಜಿಗಳ ಮಧ್ಯಪ್ರವೇಶಕ್ಕೆ ಡಾ.ರೇಣುಕಾಪ್ರಸಾದ್ ಒತ್ತಾಯ: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕರ್ತವ್ಯ ತ್ಯಜಿಸಿ ಪ್ರತಿಭಟಿಸುತ್ತೇವೆ: ಸಿಬ್ಬಂದಿಗಳು.

ಕೆವಿಜಿ ವಿಧ್ಯಾ ಸಂಸ್ಥೆಯಲ್ಲಿ ಮುಂದುವರಿದ ಅಕಾಡೆಮಿ ಗೊಂದಲ:ಸಮಾಜದ ಹಿರಿಯ ಸ್ವಾಮೀಜಿಗಳ ಮಧ್ಯಪ್ರವೇಶಕ್ಕೆ ಡಾ.ರೇಣುಕಾಪ್ರಸಾದ್ ಒತ್ತಾಯ: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕರ್ತವ್ಯ ತ್ಯಜಿಸಿ ಪ್ರತಿಭಟಿಸುತ್ತೇವೆ: ಸಿಬ್ಬಂದಿಗಳು.

ಸುಳ್ಯ: ಕೆವಿಜಿ ಅಕಾಡೆಮಿಯಲ್ಲಿ ಉಂಟಾಗಿರುವ ಗೊಂದಲ ಮತ್ತಷ್ಟು ಉಲ್ಮಣವಾಗಿದೆ , ಈ ಬಗ್ಗೆ ಅಕಾಡೆಮಿಯ ಡಾ. ಕೆ.ವಿ.ರೇಣುಕಾಪ್ರಸಾದ್ ರವರು ಸುಳ್ಯ ಮಾಧ್ಯದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸುಳ್ಯ ಕೆ ವಿ ಜಿ ಡೆಂಟಲ್ ಕಾಲೇಜು ಆವರಣದಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು ಅಕಾಡೆಮಿಯ ಅಧ್ಯಕ್ಷ ಡಾ ಕೆ.ವಿ ಚಿದಾನಂದ ತನ್ನ ಆಡಳಿತವನ್ನು ದುರುಪಯೋಗ ಪಡೆಸಿ ಇದೀಗ. ಡಾ ಜ್ಯೋತಿ ರೇಣುಕಪ್ರಸಾದ್ ,ಡಾ. ಅಭೀಜ್ಞಾ ಅವರನ್ನು ನಿರ್ದೇಶಕ ಸ್ಥಾನದಿಂದ ಪದಚ್ಯತಿ ಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ ಈ ಬಗ್ಗೆ ನಾನು ನ್ಯಾಯಾಲಯದ ಮೋರೆ ಹೋಗಲಿದ್ದೇನೆ. ಅಕಾಡೆಮಿಯಲ್ಲಿರುವ ಹಣದಲ್ಲಿ ನೆರವಿನ ರೂಪದಲ್ಲಿ ಕೊರೊನಾ ಸಂದರ್ಭ ಸಿಬ್ಬಂದಿಗಳ ‌ವೇತನಕ್ಕಾಗಿ ನಾನು ಅಣ್ಣ ಡಾ. ಚಿದಾನಂದರಲ್ಲಿ ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ ನಿನ್ನದು ನಿನಗೆ ನನ್ನದು ನನಗೆ ಎಂದು ಹೇಳಿದ್ದರು ಅಕಾಡೆಮಿಯಲ್ಲಿರುವ ಹಣ ನಮ್ಮ ತಂದೆಯವರು ಕಷ್ಟಕಾಲದಲ್ಲಿ ನೆರವಿಗಾಗಿ ಇಟ್ಟ ಹಣ: ಇದೀಗ ಹಣದ ದುರುಪಯೋಗ ಸಾಧ್ಯವಿದೆ ಸಮಾಜದ ಪ್ರಮುಖರು, ಸ್ವಾಮೀಜಿಗಳು ,ಮದ್ಯಪ್ರವೇಶ ಮಾಡಬೇಕು ಎಂದು ಡಾ. ರೇಣುಕಾಪ್ರಸಾದ್ ಒತ್ತಾಯಿಸಿರುವ ವಿಧ್ಯಮಾನ ನಡೆದಿದೆ.ನಂತರ ಮಾತನಾಡಿದ ಅವರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿ ವೆಂಕಟರಮಣ ಗೌಡರು,ಸುಳ್ಯದ ಕುರುಂಜಿಭಾಗ್ ಎಂಬ ವಿದ್ಯಾಸಂಕೀರ್ಣವನ್ನು ಸೃಷ್ಠಿಸಿ ಸುಳ್ಯವನ್ನು ವಿದ್ಯಾಕಾಶಿಯನ್ನಾಗಿ ಬೆಳೆಸಿದವರು.
ಜ್ಞಾನದೇಗುಲಗಳ ಜೊತೆಯಲ್ಲಿ ಆರೋಗ್ಯ ಧಾಮಗಳನ್ನು ನಿರ್ಮಿಸಿ ಗ್ರಾಮೀಣ ಜನರಿಗೆ ಶಿಕ್ಷಣ ಹಾಗೂ ಆರೋಗ್ಯ


ಭಾಗ್ಯವನ್ನಿತ್ತು, ಭವ್ಯ ಭಾರತದ ಪರಿಶುದ್ಧ ಪ್ರಜೆಗಳ ನಿರ್ಮಾಣಕ್ಕೆ ಶ್ರಮಿಸಿದವರು, ಶೈಕ್ಷಣಿಕವಾಗಿ ಹಿಂದುಳಿದ ಸುಳ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಗ್ರಾಮೀಣ ಯುವಕರನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬ ತನ್ನ ಉದ್ದೇಶ ಅವರದಾಗಿತ್ತು. ಈ ಎಲ್ಲಾ ಉದ್ದೇಶಗಳನ್ನು ಹೊತ್ತ ಪೂಜ್ಯ ಕೆ.ವಿ.ಜಿ.ಯವರು ದಾನ, ಧರ್ಮ, ಶಾಂತಿ, ಸಹನೆ ಮತ್ತು ಸಮತಾಭಾವದಿಂದ ಸಮಾಜವನ್ನು ಕಂಡು, ಎಲ್ಲರನ್ನೂ ಬೆಳೆಸಿ ಇಡೀ ಸಮಾಜಕ್ಕೆ ಮಾದರಿಯಾದ ಕುಟುಂಬ ಕೆವಿಜಿಯವರದ್ದಾಗಿತ್ತು.


ಒಂದೇ ವಿದ್ಯಾಸಂಕೀರ್ಣದಲ್ಲಿ ಎಲ್.ಕೆ.ಜಿ ಯಿಂದ ಹಿಡಿದು ಮೆಡಿಕಲ್ ಕಾಲೇಜುವರೇಗೆ ಶಿಕ್ಷಣ ಸಂಸ್ಥೆಗಳನ್ನು
ಕಟ್ಟಿ ಪೂಜ್ಯ ಕೆ.ವಿ.ಜಿಯವರು ಇರುವ ತನಕ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಅವರ ಕಾಲಾನಂತರದಲ್ಲಿ
ಅಕಾಡೆಮಿಯ ಉಪಾಧ್ಯಕ್ಷರಾಗಿದ್ದ ಹಿರಿಯ ಪುತ್ರ ಡಾ. ಕೆ.ವಿ. ಚಿದಾನಂದರವರು ಅಧ್ಯಕ್ಷರಾದರು ಹಾಗೂ ಕಿರಿಯ ಪುತ್ರ ಡಾ. ರೇಣುಕಾಪ್ರಸಾದ್ ಕೆ.ಬಿ. ಎಂಬ ನಾನು ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರೆದಿದ್ದೆ. ಆದರೆ ವಿದ್ಯಾಸಂಕೀರ್ಣದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ತಂದೆಯವರ ಕನಸು ನನಸು ಮಾಡಲು ಅವರ ಕಿರಿಯ ಮಗನಾದ ನಾನು ಅಂದರೆ ಹಗಲು ರಾತ್ರಿ ದುಡಿದರೂ ನನ್ನನ್ನು ಸಂಪೂರ್ಣ ಮೂಲೆಗುಂಪು ಮಾಡಲು ಡಾ. ಕೆ.ವಿ. ಚಿದಾನಂದರವರು ಪ್ರಯತ್ನಿಸುತ್ತಿದ್ದಾರೆ. ಆಡಳಿತಾತ್ಮಕವಾಗಿ ಡಾ. ರೇಣುಕಾಪ್ರಸಾದ್‌ರವರು ನೋಡಿಕೊಳ್ಳುತ್ತಿರುವ
ಶಿಕ್ಷಣ ಸಂಸ್ಥೆಗಳು; ಆದಾಯದ ದೃಷ್ಟಿಯಿಂದ ನೋಡಿದರೆ ಅಣ್ಣನಿಗೆ ಸಿಕ್ಕಿದ ಆಸ್ತಿಯ ನಾಲ್ಕನೇ ಒಂದು ಭಾಗವಾಗಿರುತ್ತದೆ. ಪೂಜ್ಯ ಕೆ.ವಿ.ಜಿಯವರ ಕಾಲದಲ್ಲ ಆಡಳಿತ ಮಂಡಳಿ ಮತ್ತು ಎಲ್ಲಾ ಸಿಬ್ಬಂದಿಗಳು ಒಗ್ಗಟ್ಟಿನಿಂದ ದುಡಿದ ಫಲವಾಗಿ, ಆಗ ಉತ್ತಮ ಆದಾಯ ಬರುತ್ತಿದ್ದ ಕೆ.ವಿ.ಜಿ ಡೆಂಟಲ್ ಕಾಲೇಜು ಹಾಗೂ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜುಗಳ ಉಳಿತಾಯದ ಹಣದಲ್ಲೇ ಸ್ಥಾಪಿಸಿಲ್ಪಟ್ಟ ಕೆ.ವಿ.ಜಿ. ಮೆಡಿಕಲ್ ಕಾಲೇಜನ್ನು ಡಾ. ಕೆ.ವಿ. ಚಿದಾನಂದರವರು ತಮ್ಮಲ್ಲೇ ಇಟ್ಟುಕೊಂಡು ಸ್ವಾರ್ಥದ ಪರಮಾವಧಿಯನ್ನು ಪ್ರದರ್ಶಿಸಿದ್ದಾರೆ. ಹಾಗೂ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಿ; ಸ್ವಂತ ತಮ್ಮ ಹಾಗೂ ಪ್ರಧಾನ ಕಾರ್ಯದರ್ಶಿಯವರಾದ ಡಾ. ರೇಣುಕಾಪ್ರಸಾದ್‌ರವರನ್ನು ಅಕಾಡೆಮಿಯಿಂದ ಹೊರಗೆ ತಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಪೂಜ್ಯ ಕೆವಿಜಿಯವರ ಘನತೆ,ಗೌರವಗಳಗ ಧಕ್ಕೆ ಬರಬಾರದೆಂಬ ಒಂದೇ ಉದ್ದೇಶದಿಂದ
ನಾನು ಅವರ ಆಡಳಿತಕ್ಕೊಳಪಟ್ಟ ಸಣ್ಣ, ಪುಟ್ಟ ಶಿಕ್ಷಣ ಸಂಸ್ಥೆಗಳನ್ನು ನಿಯತ್ತಿನಿಂದ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ ಡಾ. ಕೆ.ವಿ. ಚಿದಾನಂದರವರು ಈ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಶಿಕ್ಷಣ ಸಂಸ್ಥೆಗಳ ದೈನಂದಿನ ಚಟುವಟಿಕೆಗಳನ್ನು ಕೂಡಾ ನಿಲ್ಲಿಸಿ ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳನ್ನು ಅತಂತ್ರ ಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ.ಇಂತಹ ಸಂದಿಗ್ಧ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಭಾರೀ ಮಾನಸಿಕ ಕಿರಿ ಕಿರಿ ಅನುಭವಿಸುತ್ತಿದ್ದಾರೆ ಎಂದು ರೇಣುಕಾಪ್ರಸಾದ್ ಮಾಧ್ಯಮ ಮುಂದೆ ಅಳಲು ತೋಡಿಕೊಂಡಿದ್ದಾರೆ.


ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಸಂಚಕಾರ ಬಂದಿದೆ:. ಸಿಬ್ಬಂದಿಗಳು

ನಾವುಗಳು ದುಡಿಯುವ ವಿದ್ಯಾಸಂಸ್ಥೆಗಳನ್ನು ಬೆಳೆಸಲು ಪಟ್ಟಿರುವ ಶ್ರಮ, ಕಾರ್ಯತತ್ಪರತೆ,ಪೂಜ್ಯ ಕೆವಿಜಿಯವರ ಆಡಳಿತ ಮಂಡಳಿ ನಮ್ಮ ಮೇಲಿಟ್ಟಿರುವ ಅಭಿಮಾನ, ಪ್ರೀತಿ ವಿಶ್ವಾಸಗಳನ್ನು ಮನದಲ್ಲಿ ಇಟ್ಟುಕೊಂಡು;
ಪ್ರತಿಯೊಂದು ವಿದ್ಯಾಸಂಸ್ಥೆಗಳ ಪ್ರಾಂಶುಪಾಲರುಗಳು, ಆಡಳಿತಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ
ಸಿಬ್ಬಂದಿಗಳಾದ ನಾವುಗಳು, ನಾವು ಸೇವೆ ಸಲ್ಲಿಸುತ್ತಿರುವ ವಿದ್ಯಾಸಂಸ್ಥೆಗಳು ಅಕಾಡೆಮಿ ಅಧ್ಯಕ್ಷರಿಂದ ನಡೆಯುತ್ತಿರುವ ಹುನ್ನಾರ ಹಾಗೂ ದೌರ್ಜನ್ಯಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಚಕಾರ ಬರುವ ಸನ್ನಿವೇಶ ಉಂಟಾಗಿದೆ. ಹಾಗಾಗಿ ಕೂಡಲೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಈ ಬಗ್ಗೆ ಈಗಾಗಲೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ, ಪೂಜ್ಯ ಸ್ವಾಮೀಜಿಗಳ ಗಮನಕ್ಕೂ ತರಲಾಗಿದೆ. ಇದೀಗ ಸಮಾಜದ ಪ್ರಮುಖರು ಕೂಡಲೇ ಮಧ್ಯ ಪ್ರವೇಶ ಮಾಡಬೇಕು, ಅಕಾಡೆಮಿಯಲ್ಲಿ ತಲೆದೊರಿರುವ ಸಮಸ್ಯೆ ಪರಿಹರಿಸಿ ಕೊಡಬೇಕು, ಇಲ್ಲವಾದಲ್ಲಿ ಡಿ.23 ರಂದು ಪ್ರತಿಭಟನೆ ಮಾಡಲಿದ್ದೇವೆ. ಎಂದು ಸಿಬ್ಬಂದಿ ವರ್ಗದವರು ತಿಳಿಸಿದ್ದಾರೆ. ಪ್ರತಿಭಟನೆಯ ಕಾರ್ಯರೂಪ ತಿಳಿಸಲಿದ್ದೇವೆ.ಎಂದು ಹೇಳಿದ್ದಾರೆ.

ರಾಜ್ಯ