

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೆ. ವಿ. ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಸಹಯೋಗದಲ್ಲಿ ಪ್ರಾಥಮಿಕ ಶಾಲೆ ಅರಂತೋಡಿನಲ್ಲಿ ಉಚಿತ ಅರೋಗ್ಯ ತಪಾಸಣೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಮುಕ್ತೇಸರರಾದ ಕಿಶೋರ್ ಕುಮಾರ್ ಉಳುವಾರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞೆ ವೈದ್ಯಧಿಕಾರಿಗಳಾದ ಶ್ರೀಮತಿ ಗೀತಾ ದೊಪ್ಪ ಶಿಬಿರದಲ್ಲಿರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಜನಜಾಗೃತಿ ವೇದಿಕೆ ಸಂಪಾಜೆ ವಲಯದ ಅಧ್ಯಕ್ಷರು ಸೋಮಶೇಖರ್ ಪೈಕ, ಮುಖ್ಯೋಪಾಧ್ಯಯರಾದ ಗೋಪಾಲಕೃಷ್ಣ,ಒಕ್ಕೂಟ ಅಧ್ಯಕ್ಷ ರತ್ನಾವತಿ ಅಳಿಕೆ,ಜ್ಞಾನವಿಕಾಸ ಸಮನ್ವಯಧಿಕಾರಿ ಭಾರತಿ, ಸಂಪಾಜೆ ವಲಯ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕರು ಸ್ವಸಹಾಯ ಸಂಘದ ಸದಸ್ಯರು ಉಚಿತವಾಗಿ ಕಣ್ಣು, ಕಿವಿ ಪರೀಕ್ಷೆ, ಬಿ ಪಿ, ಶುಗರ್, ಈ ಸಿ ಜಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಗತ್ಯವಿದ್ದವರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು
