ಕಾಂತಾರ ಸಿನೀಮಾ ನೋಡಲು ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸ್ಥಳಿಯ ಮುಸ್ಲಿಂ ಗುಂಪಿನಿಂದ ಹಲ್ಲೆ: ಪ್ರಕರಣ ದಾಖಲು :ವೀಡಿಯೋ ವೈರಲ್.

ಕಾಂತಾರ ಸಿನೀಮಾ ನೋಡಲು ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸ್ಥಳಿಯ ಮುಸ್ಲಿಂ ಗುಂಪಿನಿಂದ ಹಲ್ಲೆ: ಪ್ರಕರಣ ದಾಖಲು :ವೀಡಿಯೋ ವೈರಲ್.


ಸುಳ್ಯ ಸಂತೋಷ ಚಿತ್ರಮಂದಿರದಲ್ಲಿ ಕಾಂತಾರ ತುಳು ಸಿನೀಮಾ ಹಾಕಲಾಗಿದೆ. ಕಳೆದ ಕೆಲ ವಾರಗಳ ಹಿಂದೆ 50 ದಿವಸ, ಹೌಸ್ ಪುಲ್ ಪ್ರದರ್ಶನ ಕಂಡಿದ್ದ ಕನ್ನಡ ಸಿನಿಮಾ ಇಡೀ ದೇಶದಲ್ಲೆ ಏಲ್ಲಾ ದಾಖಲೆ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು , ಈ ಸಿನಿಮಾ ಹಲವು ಭಾಷೆಗಳಲ್ಲಿ ಪ್ರದರ್ಶನ ಗೊಂಡಿತ್ತು , ಏಲ್ಲಾ ಭಾರತೀಯರು ಮತ ಪಂಥಗಳನ್ನು ಬದಿಗಿರಿಸಿ ಈ ಕಾಂತಾರ ಸಿನಿಮಾವನ್ನು ಭಾರತೀಯ ಸಿನಿಮಾ ಎಂದು ಸ್ವೀಕಾರ ಮಾಡಿದ್ದರು, ಎಲ್ಲಕಿಂತ ಮುಖ್ಯವಾಗಿ ಸಿನಿಮಾವನ್ನು ಸಿನಿಮಾವಾಗಿಯೇ ಕಂಡಿದ್ದರು, ಈ ಸಿನೀಮಾ ತುಳು ಭಾಷೆಯ ಅವತರಣಿಕೆಯಲ್ಲಿ ಸುಳ್ಯದಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನೀಮಾ ನೋಡಲು ಇಂದು 11 ಗಂಟೆಯ ಶೋ ನೋಡಲು ಕೇರಳ ಮೂಲದ ಸಹಪಾಠಿ ವಿದ್ಯಾರ್ಥಿಗಳು ಬಂದಿದ್ದರು, ಬಂದಿದ್ದವರ ಪೈಕಿ ವಿದ್ಯಾರ್ಥಿನಿ ಬುರ್ಕಾ ಧರಿಸಿದ್ದಳು, ಅವರು ಶೋ ಆರಂಭ ವಾಗುವ ಹತ್ತು ನಿಮಿಷ ಮೊದಲು ಬಂದಿದ್ದರು, ಹಾಗಾಗಿ ಅವರು ಥೀಯೇಟರ್ ಎದುರು ಭಾಗದಲ್ಲಿ ನಿಲ್ಲುವ ಬದಲು , ಸಂತೋಷ ಥಿಯೇಟರ್ ಕಂಪೌಂಡ್ ಬದಿಯಲ್ಲಿಯೇ ಬೈಕ್ ನಿಲ್ಲಿಸಲು ಹಾಕಲಾಗಿರುವ ಶೀಟಿನ ಕೆಳಗೆ ನಿಂತಿದ್ದರು, ಇದನ್ನು ಗಮನಿಸಿದ ಥಿಯೇಟರ್ ಎದುರು ಕ್ಯಾಂಟೀನ್ ನಲ್ಲಿದ್ದ ಯುವಕರ ತಂಡ ಥಿಯೇಟರ್ ಗೇಟ್ ಒಳಗೆ ಪ್ರವೇಶ ಮಾಡಿ ವಿದ್ಯಾರ್ಥಿಗಳನ್ನು ವಿಚಾರಿಸಿ ಸಿನಿಮಾ ವೀಕ್ಷಣೆಗೆ ಬಂದ ವಿದ್ಯಾರ್ಥಿಗೆ ಹಿಗ್ಗಮುಗ್ಗಾ ತಳಿಸಿದ್ದಾರೆ .ಇದನ್ನು ಗಮನಿಸಿ ಮತ್ತಷ್ಟು ಜನರು ಇಲ್ಲಿ ಸೇರಿದ್ಧಾರೆ, ಈ ಘಟನೆಯನ್ನು ಥಿಯೇಟರ್ ಒಳ ಭಾಗದಿಂದ ಥಿಯೇಟರ್ ಸಿಬ್ಬಂದಿ ವೀಡಿಯೋ ಮಾಡಿಕೊಂಡಿದ್ದಾರೆ. ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಪೋಲಿಸರಿಗೆ ಮಾಹಿತಿ ತಿಳಿದು ಕೂಡಲೆ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ ವೀಡಿಯೋ ಆದಾರದಲ್ಲಿ ಹಲ್ಲೆ ನಡೆಸಿದವರನ್ನು ಗುರುತಿಸಿ ಠಾಣೆಗೆ ಎಳೆದೊಯ್ದಿದ್ದಾರೆ, ಈ ಮಧ್ಯೆ ಹಲ್ಲೆ ನಡೆಸಿದ್ದಾನೆ ಎಂದು ಆಪಾದಿತ ವ್ಯಕ್ತಿಯ ಕೆಲಸ ಮಾಡುವ ಸ್ಥಳಕ್ಕೆ ಪೋಲಿಸರು ಧಾಳಿ ಮಾಡುವ ಸಮಯದಲ್ಲಿ ಆಪಾದಿತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಸಿನಿಮಾ ನೋಡಲು ಬಂದಂತಹ ವ್ಯಕ್ತಿಗಳ ಮೇಲೆ ಧಾರ್ಮಿಕ ಕಾರಣಕ್ಕಾಗಿ ಹಲ್ಲೆ ನಡೆಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.

ರಾಜ್ಯ