ಸುಳ್ಯದಲ್ಲಿ ಪಯಸ್ವಿನಿ ಕೃಷಿ ಮೇಳದ ಚಪ್ಪರ ಮುಹೂರ್ತ ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆ.

ಸುಳ್ಯದಲ್ಲಿ ಪಯಸ್ವಿನಿ ಕೃಷಿ ಮೇಳದ ಚಪ್ಪರ ಮುಹೂರ್ತ ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆ.

ಡಿ.16ರಿಂದ 18ರವರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪ್ರಣವ ಸೌಹಾರ್ಧ ಸಂಘದ ನೇತೃತ್ವದಲ್ಲಿ ನಡೆಯುವ ‘ಪಯಸ್ವಿನಿ ಕೃಷಿ ಮೇಳ’ದ ಚಪ್ಪರ ಮೂಹೂರ್ತ ಮತ್ತು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಡಿ.4 ರಂದು ಸುಳ್ಯದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ನಡೆಯಿತು. ಪುರೋಹಿತರಾದ ಕೃಷ್ಣಾನಂತ ಸರಳಾಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ ಬಳಿಕ ಚಪ್ಪರ ಮುಹೂರ್ತ ನೆರವೇರಿಸಲಾಯಿತು.


ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಬೃಹತ್ ಕೃಷಿ ಮೇಳದ ಆಮಂತ್ರಣ ಪತ್ರ ಬಿಡುಗಡೆ ಮಾಡಿ ಶುಭ ಹಾರೈಸಿದರು. ಪ್ರಣವ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಹಾಗು ಕೃಷಿ ಮೇಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಆರ್.ಪ್ರಸಾದ್, ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ,ಕೋಶಾಧಿಕಾರಿ ಸಂತೋಷ್ ಜಾಕೆ, ಜೊತೆ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಪದಾಧಿಕಾರಿಗಳಾದ ಎನ್.ಎ.ರಾಮಚಂದ್ರ, ಎನ್.ಎ.ಜ್ಞಾನೇಶ್, ಚಂದ್ರಶೇಖರ ಪೇರಾಲು, ಪಿ.ಎಂ.ರಂಗನಾಥ್,ಗುರುದತ್ ನಾಯಕ್, ಕೃಷಿ ಮೇಳದ ಪ್ರಚಾರ ಸಮಿತಿಯ ಸಂಚಾಲಕ ಯಶ್ವಿತ್ ಕಾಳಂಮನೆ, ಮಹೇಶ್ ಕುಮಾರ ಮೇನಾಲ, ನೂಜಾಲು ಪದ್ಮನಾಭ ಗೌಡ, ಜಯರಾಮ ಮುಂಡೋಳಿಮೂಲೆ, ವಿನುತಾ ಪಾತಿಕಲ್ಲು, ,ಮಧುರಾ ಎಂ.ಆರ್, ಚಂದ್ರಶೇಖರ ನಂಜೆ, ದಿವ್ಯಾ ನಂಜೆ, ಮಂಜುನಾಥ ಮಡ್ತಿಲ, ಪ್ರಣವ ಸೌಹಾರ್ಧ ಸಹಕಾರಿ ಸಂಘದ ನಿರ್ದೇಶಕರಾದ ಸೋಮಪ್ಪ ನಾಯ್ಕ್, ಪ್ರಣವದ ಸುಳ್ಯ ಶಾಖೆಯ ವ್ಯವಸ್ಥಾಪಕಿ ಮನಸ್ವಿನಿ, ಸಿಬ್ಬಂದಿಗಳಾದ ರಂಜಿತ್ ಅಡ್ತಲೆ, ವಿನುತಾ ಉಪಸ್ಥಿತರಿದ್ದರು. ಪ್ರಣವ ಸೌಹಾರ್ಧ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪೆನಿ , ಮಂಗಳೂರು ವಿಶ್ವ ವಿದ್ಯಾನಿಲಯ, ಸಾವಯವ ಕೃಷಿ ಗ್ರಾಹಕ ಬಳಗ ಮಂಗಳೂರು, ಸಹಾಕಾರಿ ಯೂನಿಯನ್, ತಾಲೂಕು ಆಡಳಿತ, ನಗರ ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯದಲ್ಲಿ 3 ದಿನಗಳ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ರಾಜ್ಯ