ಲೇಟಾಗಿ ಬಂದಿದ್ದಕ್ಕೆ     ಉಡುಪಿಯಲ್ಲಿ ಬೆತ್ತದಿಂದ ಮನಬಂದಂತೆ ಹೊಡೆದ ಶಿಕ್ಷಕ..!

ಲೇಟಾಗಿ ಬಂದಿದ್ದಕ್ಕೆ ಉಡುಪಿಯಲ್ಲಿ ಬೆತ್ತದಿಂದ ಮನಬಂದಂತೆ ಹೊಡೆದ ಶಿಕ್ಷಕ..!

ಉಡುಪಿ: ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರೊಬ್ಬರು ಬೆತ್ತದಿಂದ ಅಮಾನವೀಯವಾಗಿ ಹೊಡೆದಿರೊ ಘಟನೆ ವರದಿಯಾಗಿದೆ.ಈ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ.

ಇನ್ನು, ಈ ಘಟನೆ ಆನೆಗುಡ್ಡ ವಿನಾಯಕ ಗಣಪತಿ ದೇವಸ್ಥಾನದ ಬಳಿ ನಡೆದಿದೆ. ಆನೆಗುಡ್ಡೆ ಶ್ರೀವಿನಾಯಕ ಟೆಂಪಲ್​ಗೆ ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಶಿಕ್ಷಕ ಕರೆದುಕೊಂಡು ಬಂದಿದ್ದ. ಚಿತ್ರದುರ್ಗ ಜಿಲ್ಲೆಯ ಹುಣಸೆಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಐದು ನಿಮಿಷ ತಡವಾಗಿ ಬಂದರು ಎಂಬ ಕಾರಣಕ್ಕೆ ಶಿಕ್ಷಕ ಕೋಲಿನಿಂದ ವಿದ್ಯಾರ್ಥಿಗಳಿಗೆ ಮನಸ್ಸಿಗೆ ಬಂದಂತೆ ಹಿಗ್ಗಾಮುಗ್ಗ ಬಾರಿಸಿದ್ದಾರೆ.

ಈ ಅಮಾನವೀಯ ಕೃತ್ಯ ಕಂಡ ಪ್ರವಾಸಿಗರು ಕೋಪಗೊಂಡು ಶಿಕ್ಷಕನಿಗೆ ತರಾಟೆ ತೆದುಕೊಂಡಿದ್ದಾರೆ. ವಿಚಾರಿಸಲು ಬಂದ ಪ್ರವಾಸಿಗರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಶಿಕ್ಷಕನ ಈ ರೀತಿಯ ವರ್ತನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ