
ಸುಳ್ಯದಿಂದ ಕೇರಳ ಸಂಪರ್ಕಿಸುವ ರಸ್ತೆ ಕೇರಳದ ಕಲ್ಲಪಳ್ಳಿ ಗಡಿಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ರಸ್ತೆಯನ್ನು ಸಚಿವ ಎಸ್.ಅಂಗಾರರವರ ಶಾಸಕರ ವಿಶೇಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ಬರದಿಂದ ಸಾಗುತ್ತಿದ್ದು ಕಾಂಕ್ರೀಟ್ ಬಹುತೇಕ ಪೂರ್ಣ ಗೊಂಡಿದ್ದು ಕ್ಯೂರಿಂಗ್ ಆದರೆ ರಸ್ತೆ ಸಂಚಾರಕ್ಕೆ ಮುಕ್ತವಾಗುತ್ತದೆ ಹಾಗಾಗಿ ಈ ರಸ್ತೆಯಲ್ಲಿ ಸ್ಥಳೀಯರಿಗೆ ದ್ವಿಚಕ್ರ ವಾಹನ ಹೊರತು ಪಡಿಸಿ, ನಾಲ್ಕು ಚಕ್ರ ಹಾಗು ಘನ ವಾಹನ ಸಂಚಾರ ನಿಷೇಧಿಸಲಾಗಿತ್ತು. ಈ ಬಗ್ಗೆ ಅಲ್ಲಲ್ಲಿಮಾಹಿತಿಗಾಗಿ ಬ್ಯಾನರ್ ಹಾಕಲಾಗಿತ್ತು ಆದರೆ ಇದ್ಯಾವುದನ್ನೂ ಲೆಕ್ಕಿಸದ ಕೆಲ ವಾಹನ ಸವಾರರು ರಾತ್ರಿ ವೇಳೆ ಅಲ್ಲಿ ಅಳವಡಿಸಿದ ಬ್ಯಾರಿ ಕೇಡ್ ಗಳನ್ನು ತೆರವು ಮಾಡಿ ವಾಹನ ಚಲಾಯಿಸಿ ಕಾಮಗಾರಿಗೆ ಅಡ್ಡಿ ಪಡಿಸುವುದು ಕಂಡು ಬಂದಿತ್ತು .ಕ್ಯೂರಿಂಗ್ ಆಗುವ ಮೊದಲೆ ವಾಹನ ಸಂಚಾರ ಮಾಡಿದಲ್ಲಿ ರಸ್ತೆ ಕಿತ್ತು ಹೋಗುವ ಕಾರಣಕ್ಕಾಗಿ ಸ್ಥಳೀಯರು ಇಂದು ಬೆಳಗ್ಗೆ
ರಸ್ತೆಯ ಮೇಲೆ ಅಡ್ಡಲಾಗಿ ಮಣ್ಣು ಹಾಕಿ ವಾಹನ
ಸಂಚಾರವನ್ನು ತಾತ್ಕಾಲಿಕವಾಗಿ ತಡೆ ಮಾಡಿದ್ದಾರೆ.ಈ ರಸ್ಥೆ ಸಂಚಾರಕ್ಕೆ ಮುಕ್ತ ಆಗುವವರೆಗೆ ಈ ರಸ್ತೆಯಲ್ಲಿ ಪ್ರಯಾಣಿಸುವ ಸ್ಥಳಿಯ ಹಾಗೂ ಪ್ರವಾಸಿ ವಾಹನ ಸವಾರರು ಬದಲಿ ರಸ್ತೆ ಉಪಯೋಗಿಸಿ ಪ್ರಯಾಣಿಸ ಬೇಕಾಗಿ ಸ್ಥಳೀಯರು ವಿನಂತಿ ಮಾಡಿದ್ದಾರೆ.



