ಪ್ರತಿಭಟನೆಯನ್ನು ಉದ್ಧೇಶಿಸಿ ಮಾತಾನಾಡಿದ ಹಿಂದೂ ಜನ ಜಾಗೃತಿ ಸಮಿತಿ ಮುಖಂಡೆ ಪವಿತ್ರಾ ಕುಡ್ವಾ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ಐವತಿಯರ ಮೇಲೆ ಜಿಹಾದಿ ಮನಸ್ಥಿತಿಯ ವ್ಯಕ್ತಿಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕೇರಳದಂತಹ ಸಣ್ಣ ರಾಜ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹಿಂದೂ ಯುವತಿಯರ ನಗ್ನ ಚಿತ್ರಗಳನ್ನು ತೆಗೆದು ಅವರ ಮೇಲೆ ಬಲತ್ಕಾರ ಮಾಡಿ ಆಕೆಯನ್ನು ಮತಾಂತರಗೊಳಿಸಲಾಗುತ್ತಿದೆ. ಸರಕಾರ ಕೂಡಲೇ ದೇಶದಲ್ಲಿ ಮತಾಂತರ ಕಾಯ್ದೆ ಜಾರಿಗೊಳಿಸುವ ಮೂಲಕ ಇಂಥಹ ಕೃತ್ಯಗಳನ್ನು ನಿಲ್ಲಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.


