ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿ ಚುಂಚನಗಿರಿ ಕ್ಷೇತ್ರ ಭೇಟಿ.

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿ ಚುಂಚನಗಿರಿ ಕ್ಷೇತ್ರ ಭೇಟಿ.

ರಾಜ್ಯದ ನೂತನ ಉಪಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾದ ಬೆನ್ನಲ್ಲೆ ಇಂದು ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಹಾಗೂ ಕ್ಷೇತ್ರಾದಿ ದೇವತೆಗಳ ದರ್ಶನ ಪಡೆದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ,ಬಳಿಕ ಶ್ರೀ ಮಠದ ಮಹಾ ಸ್ವಾಮೀಜಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.

ಆದಿ ಚುಂಚನಗಿರಿ ಮಠದ ವತಿಯಿಂದ ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ನಾಗಮಂಗಲ ಶಾಸಕರಾದ ಶ್ರೀ ಚೆಲುವರಾಯಸ್ವಾಮಿ ರವರನ್ನು ಮಠದ ಶ್ರೀಗಳು ಗೌರವಿಸಿ ಶುಭ ಹಾರೈಸಿದರು, ಈ ಸಂಧರ್ಭ ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ರಾಜ್ಯ