


ಕೊಡಿಯಾಲಬೈಲು ಶ್ರೀ ಮಹಾಮ್ಮಾಯಿ ಮಾರಿಯಮ್ಮ ದೈವಸ್ಥಾನ ಮತ್ತು ಪರಿವಾರ ದೈವಗಳ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಮೇ 20-21 ರಂದು ನಡೆಯಿತು.
ಸುಳ್ಯ ನಗರ ವ್ಯಾಪ್ತಿಯ ಕೊಡಿಯಾಲ ಬೈಲು ಮಹಾಮ್ಮಾಯಿ ಮಾರಿಯಮ್ಮ ದೈವಸ್ಥಾನ 20 ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು .ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ನಡೆಯಿತು. ಮೇ.20ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹಸಿರುವಾಣಿ ಮೆರವಣಿಗೆ, ಬಳಿಕ ಉಗ್ರಾಣ ತುಂಬಿಸುವುದು. ಸಂಜೆ ಭಜನಾ ಕಾರ್ಯಕ್ರಮ ನಡೆಸಲಾಯಿತು. ಬಳಿಕ ತಂತ್ರಿಗಳ ಆಗಮನದ ಬಳಿಕ ದೇವತಾ ಪ್ರಾರ್ಥನೆ ನಡೆದು ಪೂಜಾ ಕಾರ್ಯ ನಡೆಸಲಾಯಿತು . ಮೇ.21ರಂದು ಬೆಳಗ್ಗಿನಿಂದ ಪೂಜೆಗಳು ನಡೆದು 12:23ರ ಮುಹೂರ್ತದಲ್ಲಿ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ನಡೆಸಲಾಯಿತು, ಬಳಿಕ ನಿತ್ಯ ನೈಮಿತ್ಯಾದಿಗಳ ನಿರ್ಣಯ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾಜೀ ಸಚಿವ ಎಸ್.ಅಂಗಾರ ಗ್ರೀನ್ ಹೀರೋ ಗುಜರಾತ್ ಉದ್ಯಮಿ ಆರ್.ಕೆ. ನಾಯರ್ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೆ.ಎನ್.,ಜೀರ್ಣೋದ್ಧಾರ ಸಮಿತಿಯ ಹರೀಶ್ ರೈ ಸೇವಾ ಸಮಿತಿ ಅಧ್ಯಕ್ಷ ಶ್ರವಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಂಕರ, ಪರಿಸರದ ನ್ಯಾಯವಾದಿ ರಾಮಕೃಷ್ಞ ನಿವಾಸಿಗಳಾದ ತಿಮ್ಮಪ್ಪ, ಶಂಕರ, ಕೃಷ್ಣಪ್ಪ, ಗೋವಿಂದ, ಪ್ರಶಾಂತ, ಪ್ರದೀಪ, ಮೋಹನ್, ಪ್ರವೀಣ್, ಕುಶಾಂತ್, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಗೀತ ರಸಮಂಜರಿ. ರಾತ್ರಿ ಶ್ರೀ ಗುಳಿಗದೈವ ಪಾಷಾಣಮೂರ್ತಿ ದೈವದ ನೇಮೋತ್ಸವ. ನಡೆಯಿತು ಮೇ.22ರಂದು ಶ್ರೀ ಧರ್ಮದೈವದ ನೇಮೋತ್ಸವ ಬಳಿಕ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿರುವುದು. ಮೇ.23 ಮತ್ತು ಮೇ.24ರಂದು ಶ್ರೀ ಮಹಾಮ್ಮಾಯಿ ಮಾರಿಯಮ್ಮ ದೇವರ ಮತ್ತು ಪರಿವಾರ ದೈವಗಳ ಮಾರಿಪೂಜೆ ನಡೆಯಲಿದೆ .


