
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಮತ್ತು ಸಚಿವರ ಪ್ರಮಾಣ ವಚನ ಪ್ರಯುಕ್ತ ಸುಳ್ಯದಲ್ಲಿಯೂ ಕಾಂಗ್ರೆಸ್ ಸಂಭ್ರಮಾಚರಣೆ ನಡೆಸಿದ್ದಾರೆ. ಸುಳ್ಯದ ಖಾಸಾಗಿ ಬಸ್ ನಿಲ್ದಾಣದ ಬಳಿ ಎಲ್ ಇಡಿ ಸ್ಕ್ರೀನ್ ಮುಖಾಂತರ ಪ್ರಮಾಣ ವಚನದ ನೇರ ಪ್ರಸಾರ ಪ್ರದರ್ಶನ ಮಾಡಲಾಯಿತು , ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ವೆಂಕಪ್ಪ ಗೌಡ,ಎನ್ ಜಯಪ್ರಕಾಶ್ ರೈ ಕೆ.ಗೋಕುಲ್‌ದಾಸ್, ಇಸ್ಮಾಯಿಲ್ ಪಡ್ಪಿನಂಗಡಿ, ಶಶಿಧರ ಎಂ.ಜೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಧರ್ಮಪಾಲ ಕೊಯಿಂಗಾಜೆ, ರಾಧಾಕೃಷ್ಣ ಪರಿವಾರಕಾನ, ಬಾಲಕೃಷ್ಣ ಭಟ್, ಸತ್ಯಕುಮಾರ್ ಆಡಿಂಜ ನಂದರಾಜ ಸಂಕೇಶ, ಮತ್ತಿತರರು ಉಪಸ್ಥಿತರಿದ್ದರು. ಇನ್ನು ಹಲವು ಮಂದಿ ಕಾಂಗ್ರೇಸ್ ಪಕ್ಷದ ಪ್ರಮುಖರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನೇರ ಬಾಗಿಯಾಗಲು ತೆರಳಿದ್ದಾರೆ.



