ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಮುಕ್ರಂಪಾಡಿ ರಸ್ತೆ ಬದಿ ಬೆಂಕಿ ಅವಘಡ.

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ
ಮುಕ್ರಂಪಾಡಿ ರಸ್ತೆ ಬದಿ ಬೆಂಕಿ ಅವಘಡ.

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ
ಮುಕ್ರಂಪಾಡಿ ರಸ್ತೆ ಬದಿ ಖಾಲಿ ಸ್ಥಳದಲ್ಲಿ ಗಿಡಗಂಟಿಗಳಿಗೆ ಬೆಂಕಿ ತಗಲಿದ ಘಟನೆ ಎ.24ರಂದು ಸಂಜೆ ನಡೆದಿದೆ.ಬೆಂಕಿಯನ್ನು ನಂದಿಸಲು ಸಾರ್ವಜನಿಕರು ಹರಸಾಹಸ ಪಟ್ಟು ಕೊನೆಗೆ ಬೆಂಕಿಯನ್ನು ಅಲ್ಪಸ್ವಲ್ಪ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದಾಗ ಅಲ್ಲಿರುವ ಅಗ್ನಿಶಾಮಕ ವಾಹನಗಳು ಇತರ ಕಡೆಯ ಬೆಂಕಿ ಶಮನಕ್ಕೆ ತೆರಳಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕೊನೆಗೂ
ಅಗ್ನಿಶಾಮಕ ಸ್ಥಳಕ್ಕೆ ಬಂದು ಬೆಂಕಿಯನ್ನು ಸಂಪೂರ್ಣ
ನಂದಿಸುವಲ್ಲಿ ಯಶಸ್ವಿಯಾಗಿದೆ.

ರಾಜ್ಯ