ಸುಳ್ಯವಿಧಾನ ಸಭಾ ಕ್ಷೇತ್ರದ ಜೆ ಡಿ ಎಸ್ ಪಕ್ಷದ ಅಭ್ಯರ್ಥಿಯಿಂದ ಕಾರ್ಯಕರ್ತರ ಮುಖಂಡರ ಮನೆಗಳಿಗೆ ಭೇಟಿ ಆರಂಭ.

ಸುಳ್ಯವಿಧಾನ ಸಭಾ ಕ್ಷೇತ್ರದ ಜೆ ಡಿ ಎಸ್ ಪಕ್ಷದ ಅಭ್ಯರ್ಥಿಯಿಂದ ಕಾರ್ಯಕರ್ತರ ಮುಖಂಡರ ಮನೆಗಳಿಗೆ ಭೇಟಿ ಆರಂಭ.

ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಜೆ ಡಿ ಎಸ್ ಪಕ್ಷದ ಅಭ್ಯರ್ಥಿ, ತಮ್ಮ ಮುಖಂಡರು ತಮ್ಮ ಕಾರ್ಯಕರ್ತರ ಭೇಟಿ ಆರಂಭಿಸಿದ್ದು
ಎ.7 ರಂದು ಜನತಾದಳ (ಜಾ) ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ. ಎಚ್. ಎಲ್. ವೆಂಕಟೇಶ್ ರವರು ಸುಳ್ಯ ತಾ| ಜೆ.ಡಿ.ಎಸ್. ಉಪಾಧ್ಯಕ್ಷರಾದ ರವಿಪ್ರಕಾಶ್ ರವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಜಾಲ್ಸೂರು – ಕನಕಮಜಲು ಗ್ರಾಮ ಸಮಿತಿ ಅಧ್ಯಕ್ಷರಾದ ಲೋಲಾಕ್ಷ ಕಾರಿಂಜ, ಪಕ್ಷದ ಹಿರಿಯ ಮುಖಂಡರಾದ ಜಾಕೆ ಸದಾನಂದ, ಪುತ್ತೂರು ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷರಾದ ಐ.ಸಿ. ಕೈಲಾಸ್, ಮಹಮ್ಮದ್ ಕೆ.ಎಸ್, ರಾಕೇಶ್ ಕುಂಟಿಕಾನ, ತಾ| ಅಧ್ಯಕ್ಷರಾದ ಸುಕುಮಾರ್ ಕೊಡ್ತುಗುಳಿ, ರಾಮಚಂದ್ರ ಗೌಡ ಮೊದಲಾದವರು

ಉಪಸ್ಥಿತರಿದ್ದರು.ಹಾಗೆಯೇ ಅವರು ಎ. 07. ರಂದು ಪ್ರೊ. ಎಚ್. ಎಲ್. ವೆಂಕಟೇಶ್ ರವರು ಸುಳ್ಯ ತಾ| ಜೆ.ಡಿ.ಎಸ್. ಮುಖಂಡರಾದ ನೀರ್ಪಾಡಿ ವಿಶ್ವನಾಥ್ ರವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ತಾ| ಅಧ್ಯಕ್ಷರಾದ ಸುಕುಮಾರ್ ಕೊಡ್ತುಗುಳಿ, ರಾಕೇಶ್ ಕುಂಟಿಕಾನ, ಪುಷ್ಪಾ ವಿಶ್ವನಾಥ್, ರಾಮಚಂದ್ರ ಗೌಡ, ವಿಫುಲ್ ನೀರ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ