
ಕಡಬ: ಕಾಡಾನೆ ದಾಳಿಯಿಂದ ಗ್ರಾಮದ ನಿವಾಸಿಗಳಿಬ್ಬರು ಮೃತಪಟ್ಟು ದೇಶದೆಲ್ಲೆಡೆ ಸುದ್ದಿಯಾಗಿದ್ದ ರೆಂಜಿಲಾಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಕೂಗೂ ಎದ್ದಿದೆ.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮ ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲಿದ್ದು ಇಲ್ಲಿನ ಖಂಡಿಗ, ಪಿಲಿಂಗಲ್ಲು, ಕಾನೋಳಿ, ಬಾಂತಾಜೆ ರಸ್ತೆಯು ಸುಮಾರು 45 ಮನೆಗಳಿಗೆ ಸಂಪರ್ಕವಿದೆ. ರಸ್ತೆ ಅಬಿವೃದ್ದಿಗಾಗಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ವಾಗಿಲ್ಲ. ಆದುದರಿಂದ ಸದರಿ ರಸ್ತೆ ಅಭಿವೃದ್ಧಿಯಾಗುವವರೆಗೂ ಮುಂದಿನ ಎಲ್ಲಾ ಚುನಾವಣೆಗಳ ಮತದಾನವನ್ನು ಬಹಿಷ್ಕಾರಿಸಲು ಒಮ್ಮತದಿಂದ ತೀರ್ಮಾನಿಸಿರುವುದಾಗಿ ಬ್ಯಾನರ್ ನಲ್ಲಿ ಉಲ್ಲೇಖಿಸಿದ್ದಾರೆ.
ನೊಂದ ರೆಂಜಿಲಾಡಿ ಗ್ರಾಮಸ್ಥರು ಈ ಬ್ಯಾನರನ್ನು ಬಾಂತಾಜೆ ಸಂಪರ್ಕ ರಸ್ತೆಯಲ್ಲಿ ಅಳವಡಿಸಿದ್ದಾರೆ.

