
ಸುಳ್ಯ: ಪೆಲ೯ಂಪಾಡಿ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದ ಅಗಳುನ್ನು( ಗಡಿ ಗುರುತು) ಕೆಡವಿ, ಆವರಣದೊಳಗೆ ಅಕ್ರಮ ಪ್ರವೇಶ ಮಾಡಿ ಶಾಲೆಯ ಆಸ್ತಿಗೆ ಹಾನಿ ಮಾಡಿರುವ ಆರೋಪದ ಮೇಲೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿ ರುವ ಬಗ್ಗೆ ತಿಳಿದು ಬಂದಿದೆ,. ಸ್ಥಳೀಯ ಒತ್ತೆಕೋಲ ಸಮಿತಿ ಅಧ್ಯಕ್ಷ ತಾರಾ ಪ್ರಸಾದ್ ರಾಮಕಜೆ ಮತ್ತು ಇತರರು ಶನಿವಾರ ತಡರಾತ್ರಿ ಹಿಟಾಚಿ ಬಳಸಿ ಶಾಲಾ ಆಸ್ತಿಗೆ ಹಾನಿ ಮಾಡಿ ಶಾಲೆಗೆ ನಷ್ಟ ಉಂಟು ಮಾಡಿದ್ದು ನಷ್ಟ ಭರಿಸಿ ಅಗಳನ್ನು ಪುನಃ ನಿಮಿ೯ಸಿಕೊಡಬೇಕು ಎಂದು ಮುಖ್ಯೋಪಾಧ್ಯಾಯರಾದ ನೀಲಾವತಿ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಪೆಲ೯ಂಪಾಡಿ ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.



ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ಪ್ರಮೋದ್ ಕೆ.ಎಸ್., ಯಶೋದಾ ಬಾಬು ರಾಜೇಂದ್ರ, ಪವನ್ ದೊಡ್ಡಮನೆ, ಮಾಜಿ ಸದಸ್ಯರಾದ ಶಿವರಾಂ ಭಟ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಧರ್ ಪೂಜಾರಿ, ವೆಂಕಟ್ರಮಣ ಆಚಾರ್ಯ, ನಿವ್ರತ ಮುಖ್ಯ ಗುರುಗಳಾದ ವೀರಪ್ಪ ಮಾಸ್ಟರ್, ಲಕ್ಷ್ಮಣ ನಾಯ್ಕ ಮೊದಲಾದವರು ನಿಯೋಗದಲ್ಲಿದ್ದರು ಬೆಳ್ಳಾರೆ ಪೊಲೀಸ್ ಉಪನಿರೀಕ್ಷಕ ಸುಹಾಸ್ ಕ್ರಮದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

