ವಾಹನ ಸವಾರರಿಗೆ ಮತ್ತೆ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 90 ಪೈಸೆ ಏರಿಕೆ!

ವಾಹನ ಸವಾರರಿಗೆ ಮತ್ತೆ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 90 ಪೈಸೆ ಏರಿಕೆ!

ಬೆಂಗಳೂರು: ದೇಶದಲ್ಲಿ ಜನಸಾಮಾನ್ಯರಿಗೆ ಇಂಧನ ದರ ಏರಿಕೆಯ ಬಿಸಿ ಮತ್ತೊಮ್ಮೆ ತಟ್ಟಿದೆ. ತೈಲ ಕಂಪನಿಗಳು ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 90 ಪೈಸೆಯಷ್ಟು ಹೆಚ್ಚಳ ಮಾಡಿವೆ. ಕೇವಲ ಒಂದು ವಾರದ ಅವಧಿಯಲ್ಲಿ ನಡೆದಿರುವ ಎರಡನೇ ಇಂಧನ ದರ ಏರಿಕೆ ಇದಾಗಿದೆ. ಕಳೆದ ಶುಕ್ರವಾರವಷ್ಟೇ ಪ್ರತಿ ಲೀಟರ್‌ಗೆ ಬರೋಬ್ಬರಿ 3 ರೂಪಾಯಿ ಹೆಚ್ಚಿಸಲಾಗಿತ್ತು.​ಇಂದಿನ ಹೊಸ ದರ ಪಟ್ಟಿ ಜಾರಿಗೆ ಬಂದ ನಂತರ ದೇಶದ ಪ್ರಮುಖ ಮಹಾನಗರಗಳಲ್ಲಿ ಇಂಧನ ದರಗಳು ಸಾರ್ವಕಾಲಿಕ ಮಟ್ಟದತ್ತ ಮುನ್ನುಗ್ಗುತ್ತಿವೆ.

ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರಗಳು. ​ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಇಂಧನ ದರಗಳ ವಿವರ ಈ ಕೆಳಗಿನಂತಿದೆ:

ಕೋಲ್ಕತ್ತಾದಲ್ಲಿ ಅತ್ಯಧಿಕ ಏರಿಕೆ​ ಇಂದಿನ ದರ ಪರಿಷ್ಕರಣೆಯಲ್ಲಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಅತ್ಯಂತ ಗರಿಷ್ಠ ಅಂದರೆ 96 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಅಲ್ಲಿ ಪೆಟ್ರೋಲ್ ದರ ₹109.70 ಕ್ಕೆ ತಲುಪಿದೆ. ವಾಣಿಜ್ಯ ನಗರಿ ಮುಂಬೈನಲ್ಲೂ ಪೆಟ್ರೋಲ್ ದರ ₹107 ದಾಟಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಕಳೆದ ಒಂದು ವಾರದಲ್ಲಿ ಇಂಧನ ದರದಲ್ಲಿ ಸತತವಾಗಿ ಏರಿಕೆಯಾಗುತ್ತಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಆತಂಕವನ್ನು ಮೂಡಿಸಿದೆ.

ರಾಷ್ಟ್ರೀಯ ವಾಹನ ಸುದ್ದಿ