
ಮರೆಮಾಚಿರುವ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಸುಳ್ಯ ನಗರದಲ್ಲಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ
ಅದರಲ್ಲೂ ಅತ್ಯಾಧುನಿಕ ಫ್ಯಾಷನ್ ಬೈಕುಗಳಲ್ಲಿ ನಂಬರ್ ಪ್ಲೇಟ್ ಅಳವಡಿಸುವ ಸಂದರ್ಭ ಬೈಕಿನ ಹಿಂಭಾಗದ ನಂಬರ್ ಪ್ಲೇಟ್ ಕಾಣದಂತೆ ಒಳಬಾಗದಲ್ಲಿ ಮಡಚಿ ಇಡಲು ಸಾಧ್ಯವಾಗುವ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿದ್ದು ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭ ಕೆಲವು ಬೈಕ್ ಗಳು ನಂಬರ್ ಪ್ಲೇಟ್ ಕಾಣದ ಕಾರಣ ತಡೆದು ಎಚ್ಚರಿಕೆ ವಿಧಿಸಲಾಗಿದೆ.ವಿಚಾರಣೆ ವೇಳೆ ಇದು ವಿದ್ಯಾರ್ಥಿಗ ಬಳಸಲಾಗಿದೆ ಕೂಡಲೇ ಇದನ್ನು ಸರಿಪಡಿಸುವುದಾಗಿ ವಾಹನ ಚಾಲಕರು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಬಳಿಕ ಇವರುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಇವರಿಗೆ ಎಚ್ಚರಿಕೆಯನ್ನು ನೀಡಿ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಸುಳ್ಯದಲ್ಲಿ ಈ ರೀತಿಯ ನಂಬರ್ ಪ್ಲೇಟ್ ಅಳವಡಿಸಿ ಕೊಡುವ ಸಂಸ್ಥೆಯವರನ್ನು ಠಾಣೆಗೆ ಕರೆಸಿ ಅವರಿಗೂ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ‘ಅಪರಾಧ ಕೃತ್ಯಗಳಗಲ್ಲಿ ತೊಡಗಿಸಿಕೊಂಡವರು ಕೃತ್ಯಗಳಿಗೆ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಒಂಟಿ ಮಹಿಳೆಯರ ಮನೆಗಳಿಗೆ ನುಗ್ಗಿ ಸರಕಳ್ಳತನ ಮಾಡುವುದು, ಮಾದಕ ವಸ್ತುಗಳ ಸಾಗಾಣಿಕೆ ಮುಂತಾದ ಚಟುವಟಿಕೆಗಳಿಗೆ ದ್ವಿಚಕ್ರ ವಾಹನಗಳನ್ನು ಬಳ ಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ.
ಆದ್ದರಿಂದ ಈ ರೀತಿಯ ನಂಬರ್ ಪ್ಲೇಟ್ ಅಳವಡಿಕೆಯಿಂದ ಸುರಕ್ಷತೆಗೆ ತೊಂದರೆ ಉಂಟಾಗುತ್ತಿದೆ. ಯಾವುದೇ ವಾಹನದ ಚಾಲಕರು ಅವೈಜ್ಞಾನಿಕ ರೀತಿಯಲ್ಲಿ ತಮ್ಮ ವಾಹನಗಳ ನಂಬರ್ ಪ್ಲೇಟ್ ಗಳನ್ನು ಅಥವಾ ವಾಹನದ ನಂಬರ್ ಕಾಣದ ರೀತಿಯಲ್ಲಿ ಎಕ್ಸ್ಟ್ರಾ ಫಿಟ್ಟಿಂಗ್ ಸಾಮಾಗ್ರಿಗಳನ್ನು ಅಳವಡಿಸಿ ಓಡಾಡುತ್ತಿರುವುದು ಕಂಡುಬಂದಲ್ಲಿ ಅಂತಹ ವಾಹನಗಳಮೇಲೆ ಮತ್ತು ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

