ಮಂಗಳೂರು – ಡೆಂಗ್ಯೂಗೆ ಪುತ್ತೂರಿನ ವ್ಯಕ್ತಿ ಬಲಿ

ಮಂಗಳೂರು – ಡೆಂಗ್ಯೂಗೆ ಪುತ್ತೂರಿನ ವ್ಯಕ್ತಿ ಬಲಿ

ಮಂಗಳೂರು ಜುಲೈ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದ್ದು, ಪುತ್ತೂರಿನ ಕಬಕದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

ಮೃತರನ್ನು ಪುತ್ತೂರು ತಾಲೂಕಿನ ಪಡ್ನೂರಿನ ಯತೀಶ್(50) ಎಂದು ಗುರುತಿಸಲಾಗಿದೆ. ಮೂಲತಃ ಬಂಟ್ವಾಳ ತಾಲೂಕಿನ ಶಂಭೂರು ನಿವಾಸಿ ಯತೀಶ್ ಅವರಿಗೆ ಜುಲೈ10 ರಂದು ಜ್ವರ ಕಾಣಿಸಿಕೊಂಡಿದ್ದು. ಬಿ.ಸಿ.ರೋಡಿನ ಕೆಲಸದ ಸ್ಥಳದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಔಷಧಕ್ಕಾಗಿ ತೆರಳಿದ್ದರು. ಅಲ್ಲಿ ಅವರನ್ನು ಪರೀಕ್ಷಿಸಿದಾಗ ಡೆಂಗ್ಯು ಪಾಸಿಟಿವ್ ಬಂದಿದ್ದು, ಪ್ಲೇಟ್ ಲೆಟ್ ಕೌಂಟ್ ತೀರಾ ಕಡಿಮೆ ಕಂಡುಬಂದಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದರು.

ರಾಜ್ಯ