
ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಳ್ಯದ ಅಂಬಟೆಡ್ಕದಲ್ಲಿ ನಿರ್ಮಿಸಿರುವ ಬಿ ಜೆ ಪಿ ಪಕ್ಷದ ನೂತನ ಕಾರ್ಯಾಲಯ“ನರೇಂದ್ರ ವಿಹಾರ” ನಾಮಪಲಕ ಅನಾವರಣ ಹಾಗೂ ಬಿಜೆಪಿ ಕಾರ್ಯಕರ್ತರ ಸ್ನೇಹಮಿಲನ ಕಾರ್ಯಕ್ರಮವು ಜು.8 ರಂದು ಸುಳ್ಯ ಬಿ ಜೆಪಿ ನೂತನ ಕಾರ್ಯಾಲಯದ ಆವರಣದಲ್ಲಿ ನಡೆಯಿತು.


ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕಂಜಿಪಿಲಿ ಯವರು ಸಬಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ಹಿರಿಯರಾದ ಡಾ. ,ರಾಮಯ್ಯ ಭಟ್ , ರಾಧಾಕೃಷ್ಣ ಕೋಟೆ, ಪಿ.ಕೆ.ಉಮೇಶ್, ಬಯಂಬು ಭಾಸ್ಕರ ರಾವ್ ನಾಮಫಲಕ ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಮಾತನಾಡಿ “ಹಲವು ಹಿರಿಯರ ಅಂದಿನ ಶ್ರಮ ಇಂದು ಪಕ್ಷವನ್ನುಉ ಗಟ್ಟಿಗೊಳಿಸಿದೆ. ಸ್ವಾಮಿ ವಿವೇಕಾನಂದರ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಇಬ್ಬರು ಕುಟುಂಬ ತೊರೆದು ದೇಶಕ್ಕಾಗಿ ದುಡಿದ ಸಂತರು, ಇವರ ಹೆಸರನ್ನು ಪಕ್ಷದ ಕಾರ್ಯಾಲಯದ ಪರಿಸರಕ್ಕೆ ಇಟ್ಟಿರುವುದು ನಿಜಕ್ಕೂ ಸೂಕ್ತವಾಗಿದೆ ಎಂದರು.
ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿ ಬಯಂಬು ಭಾಸ್ಕರ ರಾವ್ ರವರು ಪಕ್ಷ ಬೆಳೆದು ಬಂದ ಹಾದಿ ಮತ್ತು ಹಿರಿಯರ ಉಧಾತ್ತ ಸೇವೆಯನ್ನು ಸ್ಮರಿಸಿಕೊಂಡರು.

ಅಟಲ್ಜಿ ಸೇವಾ ಟ್ರಸ್ಟ್ಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಿದ ಮಧು ಸೂದನ್ ಕುಂಭಕೋಡು, ಶ್ರೀಮತಿ ಲತಾ ಮಧುಸೂದನ್ ದಂಪತಿಗಳನ್ನು ಪಕ್ಷದ ಮತ್ತು ಟ್ರಷ್ಟ್ ವತಿಯಿಂದ ಸನ್ಮಾನಿಸಲಾಯಿತು.
.ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಿ.ಕೆ.ಉಮೇಶ್, ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ರಾಧಾಕೃಷ್ಣ ಕೋಟೆ, ಮುಳಿಯ ಕೇಶವ ಭಟ್, ಸುಧಾಕರ ಕಾಮತ್ ವಿನೋಬನಗರ, ಕೃಷ್ಣ ಶೆಟ್ಟಿ ಕಡಬ, ವಿನಯ ಕುಮಾರ್ ಕಂದಡ್ಕ, ಸುಭೋದ್ ರೈ ಮೇನಾಲ, ಪ್ರದೀಪ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎ.ವಿ.ತೀರ್ಥರಾಮ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು.ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.ಪಕ್ಷದ ಅನನ್ಯ ಜವಬ್ದಾರಿ ವಹಿಸಿಕೊಂಡ ಪದಾಧಿಕಾರಿಗಳು ಮತ್ತು ಸದಸ್ಯರು, ಪಕ್ಷದ ಕಾರ್ಯಕರ್ತರು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನದ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.
