
ಈ ಜಗತ್ತಿನಲ್ಲಿ ಒಂದಲ್ಲ.. ಒಂದು ಕಾರಣಕ್ಕೆ ಅಗ್ನಿ ಅವಘಡಕ್ಕೆ ಒಳಗಾಗದವರಿಲ್ಲ..ಸುಟ್ಟ ಗಾಯದ ನರಕ ಯಾತನೆ ಅನುಭವಿಸದೆ ಇರುವವರು ಯಾರೂ ಇಲ್ಲ..ಅದರಲ್ಲೂ ಮಕ್ಕಳನ್ನು ಬೆಂಕಿ, ಬಿಸಿನೀರು , ಬಿಸಿ ಎಣ್ಣೆಯಿಂದ ರಕ್ಷಿಸುವುದು ತಾಯಂದಿರಿಗೆ ಸಾಹಸ ಮಾಡಿದಂತೆ, ಯಾಕೆಂದ್ರೆ ಅಲ್ಪ ಎಡವಿದರೂ ಸುಟ್ಟ ಗಾಯ, ಸಾವನ್ನು ತರಬಹುದು ಅಥವಾ ಶಾಶ್ವತ ಅಂಗವೈಕಲ್ಯವನ್ನು ತರಬಹುದು, ಅಥವಾ ಚರ್ಮದ ಗಾಯಗಳು ಜೀವನ ಪರ್ಯಂತ ಮಾಸದೆ ಉಳಿಯಬಹುದು ,ಮುಖ, ಕೈಗಳ ಸೌಂದರ್ಯಕ್ಕೂ ಅಡ್ಡಿಯಾಗಬಹುದು,


ಇದೆಲ್ಲದರ ನಡುವೆ ಸುಟ್ಟ ಗಾಯಗಳಿಗೆ ಕಳೆದ 40 ವರ್ಷಗಳಿಂದ ನಾಟಿ ಸಸ್ಯ ಔಷದ ನೀಡುವುದರ ಮೂಲಕ ಸಾವಿರಾರು ಜನರನ್ನು ಸುಟ್ಟ ಗಾಯಗಳಿಂದ ಗುಣಪಡಿಸುವವರು , ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದ್ದಾರೆ, ಅವರೇ” ಜಮದಗ್ನಿ ನಾಟಿ ಔಷದ ತಯಾರಕರು” ಸುಮಾರು ಹದಿನಾರಕ್ಕೂ ಹೆಚ್ಚು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಶುದ್ದ ಕೊಬ್ಬರಿ ಎಣ್ಣೆಯಲ್ಲಿ ಸಮೀಕರಿಸಿ ತಯಾರಿಸಿದ ಇವರ ಔಷದಿ ಸುಟ್ಟ ಗಾಯಕ್ಕೆ ರಾಮ ಬಾಣ,

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರ ಎಂಬಲ್ಲಿಂದ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆಯಲ್ಲಿ ಇವರ ಔಷದ ತಯಾರಾಗುತ್ತವೆ, ಹಲವಾರು ಮಂದಿ ಇವರನ್ನು ಅರಸಿ ಬರುತ್ತಾರೆ, ನಲವತ್ತು ವರುಷಗಳ ಹಿಂದೆ, ಇಲ್ಲಿಯ ವೆಂಕಟೇಶ್ವರ ಭಟ್ ಈ ನಾಟಿ ಔಷದವನ್ನು ತಯಾರಿಸುತ್ತಿದ್ದರು, ಅವರು ಸುಳ್ಯ ಪುತ್ತೂರು ಭಾಗದಲ್ಲಿ ಕಾಡು ಮೇಡುಗಳಲ್ಲಿ ಸಂಚರಿಸಿ ಔಷದ ಗಿಡವನ್ನು ಸಂಗ್ರಹಿಸಿ ಔಷದ ತಯಾರಿಸಿ ಸುಟ್ಟ ಗಾಯಗಳಿಗೆ ಹಚ್ಚುವುದರ ಮೂಲಕ ಕೇವಲ 10 ದಿನಗಳಲ್ಲಿ ವಾಸಿ ಮಾಡಿ ಕೊಡುತ್ತಿದ್ದರು.ಆಗ ನೂರಾರು ಮಂದಿ ಇವರನ್ನು ಅರಸಿ ಬರುತ್ತಿದ್ದರು , ಹಠಾತ್ತನೆ ಅವರ ಅಗಲುವಿಕೆಯಿಂದ ಬರುತ್ತಿದ್ದವರು ಮರಳಿ ಗಾಯದೊಂದಿಗೆ ತೆರಳಬೇಕಾಗಿ ಬರುತ್ತಿತ್ತು, ಇದನ್ನು ನೋಡಿ ಮರುಗಿದ ಇವರ ಮನೆಯವರು, ಮತ್ತೆ ಔಷದ ತಯಾರಿಕೆಯನ್ನು ಮುಂದುವರಿಸಿದರು,ಇವರ ಪುತ್ರ ಕೆ.ರವಿರಾಮ ಭಟ್ ತಂದೆ ತೋರಿಸಿ ಕೊಟ್ಟ ಔಷದಿ ಸಸ್ಯಗಳನ್ನು ಕಾಡುಗಳಿಂದ ಸಂಗ್ರಹಿಸಿ ಔಷದಿ ತಯಾರಿಸಿ ನೀಡಲು ಪ್ರಾರಂಭಿಸಿದರು,ಜಿಲ್ಲೆಯಾಧ್ಯಂತ ಹಲವಾರು ನೊಂದವರ ಭಾಳಿಗೆ ಬೆಳಕಾದರು, ತಂದೆ ವೆಂಕಟೇಶ್ವರ ಭಟ್ ರವರನ್ನು ಸ್ಮರಿಸಿ ಕೊಂಡು ಇವರು ನೀಡುವ ಔಷದ ಸಾವಿರಾರು ಮಂದಿಗೆ ಫಲಪ್ರಧವಾಗಿ ಕಂಡಿದೆ.ವೃತ್ತಿಯಲ್ಲಿ ಇವರು ಪುರೋಹಿತರಾಗಿದ್ದು, ಔಷದವನ್ನು ಪ್ರವೃತ್ತಿಯಾಗಿ ತೆಗೆದುಕೊಂಡರು, ಕೇವಲ ಔಷದ ತಯಾರಿಸಲು ತಗಲುವ ಖರ್ಚುಗಳನ್ನು ಮಾತ್ರ ಪಡೆಯುವ ಇವರು, ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.

ಇವರು ನೀಡುವ ಔಷದ ಇತ್ತೀಚೆಗಿನ ಗಾಯ ಮಾತ್ರವಲ್ಲದೆ, ಸುಟ್ಟ ಹಳೆಯ ಗಾಯದ ಗುರುತುಗಳು ಮಾಸಲು ಔಷದ ನೀಡುತ್ತಾರೆ, ಜೊತೆಗೆ ಇವರ ತಾಯಿ ಭಾಗೀರಥಿ ಭಟ್ ರವರು ಭಂಜೆತನಕ್ಕೂ ಔಷದ ನೀಡುತ್ತಾರೆ, ದಾಂಪತ್ಯದಲ್ಲಿ ಹನ್ನೆರಡು ವರುಷಗಳಿಂದ ಮಕ್ಕಳಾಗದ ದಂಪತಿಗಳು ಇವರ ಔಷದದ ಫಲದ ಭಾಗವಾಗಿ ಸಂತಾನ ಫಲ ಹೊಂದಿದವರು ಇದ್ದಾರೆ ಎನ್ನುತಾರೆ ಇವರು. ನೀವು ಇವರನ್ನು ಸಂಪರ್ಕಿಸ ಬೇಕೆ ಹಾಗಿದ್ರೆ ಕರೆಮಾಡಿ:ಕೆ ರವಿರಾಮ ಭಟ್ 9008138745 ಮತ್ತು ಇವರ ಸಂಖ್ಯೆಯನ್ನು ಸೇವ್ ಮಾಡಿ ಇಟ್ಟುಕೊಳ್ಳುವುದರ ಮೂಲಕ ಆಪತ್ಕಾಲಕ್ಕೆ ಸಂಪರ್ಕಿಸ ಬಹುದು, ಅಥವಾ ಅಪತ್ತಿನಲ್ಲಿರುವವರಿಗೆ ನೀಡಬಹುದು.






