
ಪೆರ್ಲ: ಮನೆಯಿಂದ ಹೊರಟ ವಿದ್ಯಾರ್ಥಿಯೋರ್ವ ನಾಪತ್ತೆಯಾದ ಘಟನೆ ಬಾಯಾರು ಕನಿಯಾಲ ಅನಂತಗಿರಿ ಎಂಬಲ್ಲಿ ನಡೆದಿದೆ.

ಬಾಯಾರು ಕನಿಯಾಲ ಅನಂತಗಿರಿಯ ಗೋಪಾಲ ನಾಯಕ್ ಎಂಬವರ ಪುತ್ರ ಅಡ್ಯನಡ್ಕ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ ನಾಯಕ್ ನಾಪತ್ತೆ.
ನಿನ್ನೆ ಸಂಜೆ ನೆರೆ ಮನೆಗೆ ಹೋಗಿ ಬರುತ್ತೇನೆಂದು ತಂದೆಯವರ KL14 T 9764 ಹೊಂಡಾ ಅಕ್ವಿವಾ ಗಾಡಿಯನ್ನು ತೆಗೆದುಕೊಂಡು ಹೋದವ ಬಳಿಕ ಬಾರದಿರುವುದನ್ನು ಗಮನಿಸಿ ಮನೆಯವರು ಹುಡುಕಾಟ ನಡೆಸಿದ್ದರು. ಈ ನಡುವೆ ಬೈಕನ್ನು ಬಾಯಾರು ಬಳ್ಳೂರು ಬಸ್ಟೆಂಡ್ ಪರಿಸರದಲ್ಲಿ ನಿಲ್ಲಿಸಿ ಅಲ್ಲಿಂದ ಖಾಸಗೀ ಬಸ್ಸಿನಲ್ಲಿ ವಿಟ್ಲ ಕುದ್ದುಪದವು ಕಡೆಗೆ ತೆರಳಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ.
ಈ ಬಗ್ಗೆ ಮಂಜೇಶ್ವರ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು ವಿದ್ಯಾರ್ಥಿ ವಿಟ್ಲ ಭಾಗಕ್ಕೆ ತೆರಳಿರುವ ಹಿನ್ನಲೆಯಲ್ಲಿ ಕರ್ನಾಟಕ ಪೋಲಿಸರಿಗೂ ತನಿಖೆಗೆ ಮನವಿ ಮಾಡಲಾಗಿದೆ. ಈ ನಡುವೆ ಯಾರದರೂ ಕಂಡವರಿದ್ದರೆ ತಕ್ಷಣ 7829764213,8086247293 ನಂಬ್ರಕ್ಕೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ
