ಫ್ರಾನ್ಸ್‌ನಲ್ಲಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ 24ರ ವರೆಗೆ ಗ್ಲಾಮರ್ ಮತ್ತು ಕಲೆಯ ಅದ್ದೂರಿ ಸಂಭ್ರಮದಲ್ಲಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ಈ ಉತ್ಸವಕ್ಕೆ ಪಾಲ್ಗೊಳ್ಳುವುದು ಒಂದು ಕಲಾವಿದನಿಗೆ ದೊಡ್ಡ ಸಾಧನೆ. ಈ ಬಾರಿ ಕನ್ನಡದ ನಟಿ ದಿಶಾ ಮದನ್ ಗೆ Broadband ವಿಶೇಷ ಆಹ್ವಾನ ನೀಡಲಾಗಿದೆ!


ಬೆಂಗಳೂರು ಹುಟ್ಟಿದ ದಿಶಾ ಮದನ್ ತಮ್ಮ ಬಾಲ್ಯದಿಂದಲೇ ಕಲೆ ಪ್ರೀತಿಸುತ್ತಾ ಬಂದವರು. ಅವರ 3ನೇ ವರ್ಷದ ಹುಟ್ಟುಹಬ್ಬದ ವೇಳೆ ಅವರ ತಾಯಿ ನೃತ್ಯ ತರಗತಿಗೆ ಸೇರಿಸಿ, ನಂತರ ಅವರ ಜೀವನದ ದಿಕ್ಕೇ ಬದಲಾಯಿಸಿತು. ದಿನವೂ ಗಂಟೆಗಟ್ಟಲೆ ನೃತ್ಯ ಅಭ್ಯಾಸ ನಡೆಸುತ್ತಿದ್ದ ದಿಶಾ, ತಮ್ಮ ತಾಯಿoಯ ಪ್ರೋತ್ಸಾಹದಿಂದ ಮುಂದೆ ಸಾಗಿದರು. ರಾಜ್‌ಕುಮಾರ್ ಅವರ ಹಾಡುಗಳಲ್ಲಿಯೇ ಬೆಳೆದ ದಿಶಾ, ‘ಬಬ್ರುವಾಹನ’ ಸಿನಿಮಾ ನೋoಡುತ್ತ ಅಜ್ಜನೊಡನೆ ಕಳೆದಿದ್ದ ಭಾನುವಾರಗಳು ಅವಳ ಸ್ಫೂರ್ತಿಯ ಮೂಲವಾಗಿವೆ ಎಂದು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಡಿದ್ದಾರೆ.
“ಅಪ್ರತೀಕ್ಷಿತವಾಗಿ ನಟನೆಗೆ ಹೆಜ್ಜೆ ಇಟ್ಟೆ. ಆದರೆ ಪ್ರತಿ ನರ್ತಕಿಯೊಳಗೂ ಒಬ್ಬ ನಟಿ ಇರುತ್ತಾಳೆ,” ಎನ್ನುತ್ತಾ, ತಮ್ಮ ಕಲಾಯಾತ್ರೆಯ ಹಿನ್ನಲೆ ವಿವರಿಸುತ್ತಾರೆ ದಿಶಾ.
ಈ ಬಾರಿ ಅವರು ಕಾನ್ಸ್‌ನ ರೆಡ್ ಕಾರ್ಪೆಟ್ ಮೆಟ್ಟಿಲು ಏರುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಕ್ಷಣ. ಸ್ಥಳೀಯ ಕಲೆಯಿಂದ ಪ್ರಾರಂಭಿಸಿ ಜಾಗತಿಕ ವೇದಿಕೆಗೆ ದಿಶಾ ಮದನ್ ಪಯಣಿಸಿದ ರೀತಿ ಮುಂದಿನ ಪೀಳಿಗೆಯ ಕಲಾವಿದರಿಗೆ ಪ್ರೇರಣೆಯಾಗಬಹುದು.
*