
ಮೃತಪಟ್ಟ ವ್ಯಕ್ತಿಗೆ ಹಾರ,ಬಟ್ಟೆ ,ಅಗರ ಬತ್ತಿ ಕೊಂಡೊಯ್ಯುವುದಕಿಂತ ಮನೆಯವರಿಗೆ ಹಣಕಾಸು ನೆರವು ನೀಡಿದಲ್ಲಿ ಆ ಕುಟುಂಬದ ದುಖಃದಲ್ಲಿ ನಿಜವಾಗಿಯೂ ಭಾಗಿಯಾದಂತೆ, ಸಾವಿನ ಹೊಡೆತದಿಂದ ಜರ್ಜರಿತವಾದ ಮನೆಯವರನ್ನು ಆರ್ಥಿಕ ಸಂಕಷ್ಟದಿಂದ ಅಲ್ಪ ಮಟ್ಟಿಗಾದರೂ ರಕ್ಷಣೆ ಮಾಡಬಹುದೆಂಬ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.
ಅರಂತೋಡು ಗ್ರಾಮ ಗೌಡ ಸಮಿತಿಯಿಂದ ಮಹತ್ವದ ತೀರ್ಮಾನ, ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೊಂದು ಸಮಾಜದ ಮಾದರಿ ನಡೆ ಎಂದು ಬಣ್ಣಿಸಿದ್ದಾರೆ , ಈ ಬಗ್ಗೆ ಕರಪತ್ರ ಹೊರಡಿಸಿರುವ ಗ್ರಾಮ ಸಮಿತಿಯು ಈ ರೀತಿ ಕರಪತ್ರ ಹಂಚಿದ್ದಾರೆ.

ಗೌಡ ಗ್ರಾಮ ಸಮಿತಿ ಆರಂತೋಡು, ಗ್ರಾಮದ ಕುಟುಂಬಗಳ ಮುಖ್ಯಸ್ಥರು, ಹಿರಿಯರು, ಚಿಂತಕರು, ಊರುಗೌಡರು ಸೇರಿ ಚರ್ಚಿಸಿ ವಿಮರ್ಶಿಸಿ ತೆಗೆದುಕೊಂಡ ನಿರ್ಧಾರಗಳಾಗಿವೆ ಎಂದಿದೆ.
1)ಆರಂತೋಡು ಗ್ರಾಮದ ಗೌಡ ಜನಾಂಗದ ಕುಟುಂಬದ ಮನೆಗಳಲ್ಲಿ ವ್ಯಕ್ತಿಯೋರ್ವ ಮರಣ ಹೊಂದಿದಾಗ ಸಂಬಂಧಿಕರು, ನೆಂಟರು, ಆಪ್ತರು ಮಿತ್ರರು ಊರಿನವರು ಬಟ್ಟೆ, ಗಂಧದ ಹಾರ, ಹೂವಿನ ಮಾಲೆ, ಅಗರಬತ್ತಿ ಮೊದಲಾದ ವಸ್ತುಗಳನ್ನು ತಂದು ಶವಕ್ಕೆ ಒಪ್ಪಿಸುವುದರಿಂದ ರಾಶಿ ರಾಶಿ ಸುಡುವುದು, ಮತ್ತು ಬಿಸಾಡುವುದು, ಇದೊಂದು ಪ್ರಯೋಜನವಿಲ್ಲದ ವ್ಯವಸ್ಥೆಯಾಗಿದೆ. ಅನಾವಶ್ಯಕವಾಗಿ ಹಣದ ಪೋಲಾಗುವಿಕೆ ಎಂಬುದು ಅಂತ್ಯಸಂಸ್ಕಾರದಲ್ಲಿ ಕಂಡು ಬಂದ ಚಿತ್ರಣವಾಗಿದೆ.
2) ಅಂತಿಮ ನಮನ ಸಲ್ಲಿಸಲು ಬರುವ ಸಮಯದಲ್ಲಿ ಮೇಲೆ ತಿಳಿಸಿರುವ ವಸ್ತುಗಳ ಬದಲಾಗಿ ಅದೇ ಮೌಲ್ಯದ ಹಣವನ್ನು ಮೃತ ದೇಹದ ಹತ್ತಿರ ಬುಟ್ಟಿ/ಪಾತ್ರೆಯನ್ನು ಇಟ್ಟು ಅದರಲ್ಲಿ ಹಾಕುವುದರಿಂದ ಸಂಗ್ರಹಗೊಂಡ ಹಣವನ್ನು ಸಂಸ್ಕಾರದಿಂದ ಹಿಡಿದು ಮುಂದಿನ ಕಾರ್ಯಕ್ರಮಗಳಿಗೆ ಉಪಯೋಗಿಸುವುದರಿಂದ ಖರ್ಚಿನ ಭಾರವನ್ನು ಸರಿದೂಗಿಸಲು ಸಾಧ್ಯವಿದೆ. ಹಾಗೆ ಸಂಗ್ರಹಗೊಂಡ ಹಣವನ್ನು ಮನೆಯವರು ಉಪಯೋಗಿಸಲು ಇಷ್ಟಪಡದಿದ್ದಲ್ಲಿ
ಮೃತರ ಹೆಸರಲ್ಲಿ ವಿದ್ಯಾಸಂಸ್ಥೆಗಳಿಗೋ, ದೇವಸ್ಥಾನಗಳಿಗೂ ನಿಧಿಯಾಗಿ ನೀಡಬಹುದು.
3)ಗ್ರಾಮದ ಕುಟುಂಬಗಳಲ್ಲಿ ವ್ಯಕ್ತಿಯೋರ್ವ ಮರಣ ಹೊಂದಿದಾಗ ಕುಟುಂಬದ ಯಜಮಾನ ಯಾ ಊರಗೌಡರು ತೆರಳಿ ಹಣ ಹಾಕಲು ಬುಟ್ಟಿ ಯಾ ಪಾತ್ರೆಯನ್ನು ಇಡಲು ವ್ಯವಸ್ಥೆ ಮಾಡುವುದು. ಶವಕ್ಕೆ ಬಟ್ಟೆ, ಗಂಧದ ಮಾಲೆ, ಊದುಬತ್ತಿ, ಕೊರತೆಯಾಗದಂತೆ ಮೃತರ ಮನೆಯವರು,ಸೋದರದವರು, ರಕ್ತ ಸಂಬಂಧಿಗಳು ವ್ಯವಸ್ಥೆ ಮಾಡಿಕೊಳ್ಳುವುದು.
ಹಾಗಾಗಿ ಮುಂದಿನ ದಿವಸಗಳಲ್ಲಿ ಅರಂತೋಡು ಗ್ರಾಮದ ಗೌಡ ಕುಟುಂಬಸ್ಥರು ಮೇಲೆ ತಿಳಿಸಿರುವ ವಿಷಯವನ್ನು ಅನುಷ್ಠಾನಗೊಳಿಸಲು ಬದ್ಧರಾಗಬೇಕಾಗಬೇಂದು ವಿನಂತಿಸಿದೆ.