
ಸಾತ್ವಿಕ ಮನಸ್ಸು, ಸಾಧನೆಯ ಹಂಬಲವಿದ್ದರೆ ಏನನ್ನೂ ಸಾದಿಸಬಹುದು ಎನ್ನುವುದಕ್ಕೆ ಸುಳ್ಯದ ಯುವಕ ಜ್ವಲಂತ ಸಾಕ್ಷಿ.ಒಂದಿನಿತು ಸ್ವಾರ್ಥಪರ ಚಿಂತಿಸದೆ ಸಮಾಜಕ್ಕೆ ತೆರೆದು ಕೊಂಡು ಕೆಲಸ ಮಾಡುವುದು ಎಂದರೆ ಈಗಿನ ಕಾಲದಲ್ಲಿ ಊಹಿಸಿಕೊಂಡಷ್ಟು ಸುಲಭವಲ್ಲ. ಬಡತನ ಹಾಗೂ ಬಾಲ್ಯದ ಕಷ್ಟಗಳನ್ನು ಮೆಟ್ಟಿನಿಂತು, ಸ್ವಂತ ದುಡಿಮೆಯೊಂದಿಗೆ ಸಮಾಜಕ್ಕೆ ತನ್ನನ್ನು ತಾನೇ ಪರಿಚಯಿಸಿಕೊಂಡು ತಾನೆ ಮಾದರಿಯಾದ ಈ ಯುವಕ
ಹುಟ್ಟು ಧನಿಕನೂ ಅಲ್ಲ; ಪ್ರಗತಿಪರ ಕೃಷಿಕನೂ ಅಲ್ಲ ; ಉದ್ಯಮಿ ಶೀಲನಂತು ಅಲ್ಲವೇ.. ಅಲ್ಲ, ಆದರೂ ನೊಂದವರ ಬಾಳಿಗೆ ಬೆಳಕಾಗಿ, ಕಷ್ಟ ಎಂದು ಬಂದವರಿಗೆ ನೆರಳಾಗಿ ತನ್ನದೇ ಆದ ಮಾತಿನ ಶೈಲಿಯಲ್ಲಿ, ಮುಗ್ಧತೆ ,ಗಾಂಭೀರ್ಯ, ಹಾಸ್ಯ, ಭದ್ದತೆ , ಸಮಾಜಮುಖಿ ಚಿಂತನೆಗಳನ್ನು ಜನರಲ್ಲಿ ತುಂಬುತ್ತಾ ತಾನು ಬದಲಾಗಿ ಸಮಾಜವನ್ನು ಬದಲಾಯಿಸಿದ, ಮಾತಿನಲ್ಲೆ ಮಂತ್ರಮುಗ್ಧವಾಗಿಸ ಬಲ್ಲ ಯುವ ವಾಗ್ಮಿ , ಖ್ಯಾತ ನಿರೂಪಕ “ವಿ ಜೆ ವಿಖ್ಯಾತ್”.

ಹೌದು ವಿ. ಜೆ ವಿಖ್ಯಾತ್ ಈಗ ಜಿಲ್ಲೆಯ ಪ್ರಸಿದ್ದ ಯೂಟ್ಯೂಬರ್ ಜೊತೆಗೆ ಅಸಹಾಯಕರ ಕೈ ಹಿಡಿಯುತ್ತಿರುವ ಯುವಕ , ಈತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಯುವಕ ,ಈತನಿಗೆ ಎಳವೆಯಲ್ಲಿ ನಿರೂಪಣೆ ಎಂದರೆ ಅದೇನೋ ಪ್ರೀತಿ..ಕಾಲೇಜು ಶಿಕ್ಷಣ ಮುಗಿಸಿ ಅವಕಾಶಕ್ಕಾಗಿ ಹುಡುಕಾಟ, ಆದರೆ ಗ್ರಾಮೀಣ ಪ್ರದೇಶವಾದ ಸುಳ್ಯದಲ್ಲಿ ಸರಿಯಾದ ವೇದಿಕೆ ಸಿಗದೆ ಬದುಕಿಗಾಗಿ ಪರ್ಯಾಯ ಉದ್ಯೋಗ ಮಾಡಬೇಕಾದ ಅನಿವಾರ್ಯತೆ…ಹಾಗೋ ಹೇಗೂ ಕೆಲವೊಂದು ಕಾರ್ಯಕ್ರಮದಲ್ಲಿ , ಶಾಲಾ ವಾರ್ಷಿಕೋತ್ಸವದಲ್ಲಿ ನಿರೋಪಣೆ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗತೊಡಗಿದ, ಇದೇ ಸಂದರ್ಭ ಅಚಾನಕ್ ಆಗಿ ಸುಳ್ಯದಲ್ಲಿ ಸಣ್ಣ ಖಾಸಗಿ ಮಾಧ್ಯಮ ಆರಂಭವಾಗಿ ಅವರೊಂದಿಗೆ ಬೆರೆತು ಜೊತೆಯಾದ, ಆದರೆ ಕೆಲವೇ ತಿಂಗಳಲ್ಲಿ ಅದು ಮುಚ್ಚಿ ಹೋಯಿತು, ಆದರೆ.. ಇಲ್ಲಿ ಸಿಕ್ಕಿದ್ದು ವಿಖ್ಯಾತ್ ಬದುಕಿಗೆ ಟ್ವಿಸ್ಟ್, ತಾನೇ ಯೂಟ್ಯೂಬ್ ಚಾನೆಲ್ ತೆರೆದು , ಕೆಲ ಸಂದರ್ಶನಗಳನ್ನು ಮಾಡತೊಡಗಿದ, ಕೆಲ ಸ್ಥಳಗಳನ್ನು ಪರಿಚಯಿಸತೊಡಗಿದ, ನಿದಾನವಾಗಿ ಜನರ ಮನಗೆಲ್ಲುವಲ್ಲಿ ಸಫಲನಾದ, ಯೂಟ್ಯೂಬ್ ನಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಇವನ ವೀಡಿಯೋ ವೀಕ್ಷಿಸಲು ಕಾತುರರಾದರು ಇದೇ ಸಂದರ್ಭ ಜೊತೆಯಾದವರು ಗೆಳೆಯರಾದ ಚಂದು ಸುಳ್ಯ ,ಕಿಶೋರ್, ಕಾರ್ತಿಕ್, ಅಮೃತೇಶ್, ನಂತರ ಮುನ್ನುಗ್ಗಿದ ತಂಡ ಗೆದ್ದು ಕೊಂಡದ್ದು ಲಕ್ಷಾಂತ ಜನರ ಹೃದಯ. ಅಸಾಯಕ ಸ್ಥಿತಿಯಲ್ಲಿ ಮಲಗಿದ್ದ , ನೋವುಗಳಿಂದ ನರಳಿದ್ದ ಅನೇಕ ನೊಂದವರ ಚಿಕಿತ್ಸೆಗಾಗಿ ವೀಕ್ಷಕರಲ್ಲಿ ನಿವೇದಿಸಿಕೊಂಡಾಗ ಹರಿದು ಬಂತು ಲಕ್ಷ ಲಕ್ಷ ಹಣ , ಕೇವಲ 14 ತಿಂಗಳ ಯೂಟ್ಯೂಬ್ ಪಯಣದಲ್ಲಿ ಜನರಿಂದ ಹರಿದು ಬಂದ ಹಣದಲ್ಲಿ ಈವರೆಗೆ ಚಿಕಿತ್ಸೆಗೆ ನೀಡಿದ್ದು 15 ಲಕ್ಷ ರೂಪಾಯಿ, ಇನ್ನು ನೆರವು ನೀಡಲು, ಸುದ್ದಿಮಾಡಲು ಹೋಗವ ಬರುವ ಖರ್ಚುಗಳನ್ನು ಸ್ವಂತ ಹಣದಲ್ಲಿ ಬರಿಸಿಕೊಂಡು ಸೇವೆ ನೀಡುತಿರುವ ವಿ.ಜೆ ವಿಖ್ಯಾತ್ ತಂಡದ ಸೇವೆ ನಿಜವಾಗಿಯೂ ಅಪ್ರತಿಮವಾದುದು ಮತ್ತು ಶ್ಲಾಘನೀಯವಾದುದು.ಎಲ್ಲಾ ಇದ್ದು ಇಲ್ಲದರೆಡೆಗೆ ಮನಸು ಹರಿಸುವವರಿಗೆ ಮಾದರಿ..

ಆಲೆಟ್ಟಿ ಗ್ರಾಮದ ಬಾರ್ಪಣೆಯಲ್ಲಿ ವಾಸ ಮಾಡುತ್ತಿರುವ ವಿಖ್ಯಾತ್ ಕೆಲಸಕ್ಕೆ ಅಮ್ಮ ಸರೋಜಿನಿ ನೀಡುವ ಸಹಕಾರವೂ ತಂಬಾ … ಮನೆ ಬಿಟ್ಟು ಸುತ್ತಾಡುವ ಮಗನ ಮೇಲಿನ ಭರವಸೆ ಕಳೆದುಕೊಳ್ಳದ ತಾಯಿಯರು ಕೂಡ ಸಾದನೆಯ ಬೆನ್ನ ಹಿಂದಿನ ನೆರಳುಗಳು, ಇನ್ನು ಮೊಬೈಲ್ ಯಾವದೇ ಸಿಗ್ನಲ್ ಸಿಗದಿದ್ದರೂ ತಾನು ಸಂಗ್ರಹಿಸಿದ ವೀಡಿಯೋವನ್ನು ಮನೆಯಲ್ಲಿ ತಾನೇ ಎಡಿಟ್ ಮಾಡಿ ಮತ್ತೆ ನಾಲ್ಕೈದು ಕಿ .ಮೀ ಕ್ರಮಿಸಿ ಅಪ್ಲೋಡ್ ಮಾಡುವುದು ಎಂದರೆ ಅದು ಒಂದು ಸವಾಲು, ನೆಟ್ವರ್ಕ್ ಸಮಸ್ಯೆ ಇದ್ದರೂ ಒಬ್ಬ ಯಶಸ್ವಿ ಯೂಟ್ಯೂಬರ್ ಆಗಿ ಹೊರಹೊಮ್ಮಿರುವ ವಿ.ಜೆ ವಿಖ್ಯಾತ್ ಮತ್ತು ಮತ್ತವರ ತಂಡದಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ ಎಂಬುದು ಎಲ್ಲರ ಆಶಯ.



