ಮೂಡಬಿದಿರೆ: ಖಾಸಗಿ ಬಸ್ ವೇಗದ ಧಾವಂತಕ್ಕೆ ವಿದ್ಯಾರ್ಥಿ ಬಲಿ.

ಮೂಡಬಿದಿರೆ: ಖಾಸಗಿ ಬಸ್ ವೇಗದ ಧಾವಂತಕ್ಕೆ ವಿದ್ಯಾರ್ಥಿ ಬಲಿ.

ಮೂಡಬಿದಿರೆ, ಜೂನ್ 07: ಖಾಸಗಿ ಬಸ್ ವೇಗದ ಧಾವಂತಕ್ಕೆ ವಿದ್ಯಾರ್ಥಿ ಬಲಿಯಾದ ಘಟನೆ ಮೂಡಬಿದಿರೆಯ ಎಡಪದವು ಬಳಿ ನಡೆದಿದೆ.

ಮೂಡಬಿದಿರೆಯ ಎಡಪದವು ಎಂಬಲ್ಲಿ ಮಂಗಳವಾರ ಸಂಜೆ ಬೈಕ್ ಗೆ ಬಸ್ ಡಿಕ್ಕಿಯಾಗಿದ್ದು ಬಸ್ ಚಾಲಕನ ಅಜಾಗರೂಕತೆಗೆ ಬೈಕ್ ಸವಾರ ಕಾರ್ತಿಕ್ ಆಚಾರ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸ್ ಡಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಫಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಸ್ ಚಾಲಕ ಅಜಾಗರೂಕತೆಯ ಚಾಲನೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಎಡಪದವು ಜಂಕ್ಷನ್ ನಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಖಾಸಗಿ ಬಸ್ ಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.

ರಾಜ್ಯ