ಕಲ್ಚೆರ್ಪೆ ತ್ಯಾಜ್ಯ ವಿಲೆವಾರಿ ಘಟಕಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ: ಗ್ಯಾಸಿಫೀಕೇಷನ್ ಯಂತ್ರ ಅಳವಡಿಕೆ ಬಗ್ಗೆ ಸಂಸದರ ಶ್ಲಾಘನೆ.

ಕಲ್ಚೆರ್ಪೆ ತ್ಯಾಜ್ಯ ವಿಲೆವಾರಿ ಘಟಕಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ: ಗ್ಯಾಸಿಫೀಕೇಷನ್ ಯಂತ್ರ ಅಳವಡಿಕೆ ಬಗ್ಗೆ ಸಂಸದರ ಶ್ಲಾಘನೆ.

ಸುಳ್ಯಕ್ಕೆ ಇಂದು ಮಂಗಳೂರು ಸಂಸದ ಹಾಗೂ ಬಿಜೆಪಿ
ರಾಜ್ಯಾಧ್ಯಕ್ಷ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ. ಬಂದ ಅವರು ಸುಳ್ಯ ನಗರ ಪಂಚಾಯತ್ ನ ವತಿಯಿಂದ ಕಲ್ಬರ್ಪೆ ಯಲ್ಲಿ ಅಳವಡಿಸಲಾಗಿರುವ ಗ್ಯಾಸಿಫಿಕೇಷನ್ ಯಂತ್ರವನ್ನು ಪರಿಶೀಲಿಸಿದರು. ನಗರ ಪಂಚಾಯತ್ ನ ಈ ವಿನೂತನ
ಪ್ರಯೋಗಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಇದನ್ನು
ಲಾಭದಾಯಕವಾನ್ನಾಗಿ ಮಾಡುವ ಕುರಿತು ಯೋಜನಾ
ವರದಿ ಸಿದ್ಧಪಡಿಸಲು ತಿಳಿಸಿದರು. ಈ ಕುರಿತಂತೆ ಸ್ವಚ್ಛ
ಭಾರತ್ ಮಿಷನ್ ಅಥವಾ ಕಂಪೆನಿಗಳ ಸಿ ಎಸ್ ಆರ್
ನಿಧಿಯಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಸಂಸದರಿಗೆ ತ್ಯಾಜ್ಯ ಸಂಸ್ಕರಣ ಮತ್ತು ಅದರಿಂದ ಉತ್ಪಾದಿಸುತ್ತಿರುವ ಇಂದನ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಪಂಚಾಯತ್ ಸದಸ್ಯರುಗಳಾದ ಕಿಶೋರಿ ಶೇಟ್, ಶೀಲಾ ಕುರುಂಜಿ, ಶಿಲ್ಪಾ ಸುದೇವ್, ಸರೋಜಿನಿ ಪೆಲತಡ್ಕ, ಬುದ್ದ ನಾಯ್ಕ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಎಸ್.ಎನ್. ಮನ್ಮಥ, ಸಂತೋಷ್ ಜಾಕೆ, ಜಿನ್ನಪ್ಪ ಪೂಜಾರಿ, ಶ್ರೀನಾಥ್ ರೈ ಬಾಳಿಲ ಇತರ ನಾಯಕರು ಜತೆಗಿದ್ದರು.

ರಾಜ್ಯ