ಕರ್ನಾಟಕದ ನೂತನ ಸಿಎಂ ಆಯ್ಕೆ ಇನ್ನೂ ಅಂತಿಮ ನಿರ್ಧಾರವಾಗಲಿಲ್ಲ: ವದಂತಿಗಳನ್ನು ನಂಬಬೇಡಿ: ರಣದೀಪ್ ಸುರ್ಜೆವಾಲ.

ಕರ್ನಾಟಕದ ನೂತನ ಸಿಎಂ ಆಯ್ಕೆ ಇನ್ನೂ ಅಂತಿಮ ನಿರ್ಧಾರವಾಗಲಿಲ್ಲ: ವದಂತಿಗಳನ್ನು ನಂಬಬೇಡಿ: ರಣದೀಪ್ ಸುರ್ಜೆವಾಲ.

: ಕರ್ನಾಟಕದ ನೂತನ ಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹಲವು ಮಾಧ್ಯಮಗಳು ವರದಿ ಮಾಡಿರುವ ಬೆನ್ನಲ್ಲೆ ರಣದೀಪ್ ಸುರ್ಜೇವಾಲ ಈ ಬಗ್ಗೆ ಸ್ಪಷ್ಟನೆ ನೀಡಿದ್ದು,ಸಿಎಂ ಆಯ್ಕೆ ಬಗ್ಗೆ ಯಾವುದೇ
ಅಂತಿಮವಾಗಿಲ್ಲ ಎಂದು ತಿಳಿಸಿದ್ದಾರೆ. ಖರ್ಗೆ ನಿವಾಸದ ಬಳಿ ಖಾಸಾಗಿ ಮಾಧ್ಯಮದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದು , ಅವಿರೋಧವಾಗಿ ನಾಯಕನ ಆಯ್ಕೆಗೆ ಯತ್ನಿಸುತ್ತಿದ್ದೇವೆ. ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ, 48ರಿಂದ 78 ಗಂಟೆಗಳೊಳಗೆ ಹೊಸ ಸಚಿವ ಸಂಪುಟ ರಚಿಸುವುದಾಗಿ ಅವರು ತಿಳಿಸಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ಕೂಡ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇನ್ನು ಕೂಡ ಚರ್ಚೆ ನಡೆಸುತ್ತಿದ್ದೇವೆ. ಸುಳ್ಳು ಸುದ್ದಿಗಳಿಂದ ದೂರವಿರಿ, ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ಅವರು ಹೇಳಿದರು.
ಇನ್ನೂ ಇದೇ ವಿಷಯಕ್ಕೆ ಸಂಭಂದಿಸಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಸಿಗದಿದ್ದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು ಇದೀಗ ಕರ್ನಾಟಕದ ಕಾಂಗ್ರೇಸ್ ನಾಯಕರ ನಡೆಯನ್ನು ಇಡೀ ದೇಶವೇ ಗಮನಿಸುತ್ತಿದೆ.

ರಾಜ್ಯ