
ವಿರಾಜಪೇಟೆ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಎ ಎಸ್ ಪೊನ್ನಣ್ಣ ಗೆಲುವಿನ ಹಿನ್ನಲೆ, ಸಂಪಾಜೆ ಗ್ರಾಮ ಚೆಂಬು ಗ್ರಾಮ, ಪೆರಾಜೆ ಗ್ರಾಮದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ಮಾಡಿದ್ದಾರೆ ..

.ಮಡಿಕೇರಿಯಿಂದ ಸುಮಾರು ನೂರೈವತ್ತಕ್ಕೂ ಮಿಕ್ಕಿ ವಾಹನಗಳಲ್ಲಿ ಸಂಪಾಜೆ, ಚೆಂಬು ಮತ್ತು ಪೆರಾಜೆ ಭಾಗದಲ್ಲಿ ವಾಹನ ಜಾಥಾ ನಡೆಸಿದ ಕಾಂಗ್ರೇಸ್ ಕಾರ್ಯಕರ್ತರು, ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದ್ದಾರೆ, ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವು ಐತಿಹಾಸಿಕ ದಾಖಲೆಯಾಗಿದ್ದು ,ಈ ಹಿಂದೆ ಕೊಡಗು ಬಿಜೆಪಿಯ ಭದ್ರ ಕೋಟೆಯಾಗಿತ್ತು, ಇದೀಗ ಪ್ರಥಮ ಬಾರಿಗೆ ಕಾಂಗ್ರೇಸ್ ಈ ಬಾಗವನ್ನು ಗೆದ್ದು ಬೀಗಿದ್ದು ಕಾರ್ಯಕರ್ತರು ಸಂಭ್ರಮಿಸಿದ್ದಾರೆ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದ್ದಾರೆ.

