ಮುಕ್ಕೂರು ; ಸಹೋದರ‌ ಹಾಗೂ ಆತನ ಪತ್ನಿಯ ಹೆಸರು ಡಿಲೀಟ್ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಮತ ಚಲಾವಣೆ..!

ಮುಕ್ಕೂರು ; ಸಹೋದರ‌ ಹಾಗೂ ಆತನ ಪತ್ನಿಯ ಹೆಸರು ಡಿಲೀಟ್ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಮತ ಚಲಾವಣೆ..!

ಮುಕ್ಕೂರು : ಸುಳ್ಯ ವಿಧಾನಸಭಾ ಕ್ಷೇತ್ರದ ಪೆರುವಾಜೆ ಗ್ರಾಮದ ಮುಕ್ಕೂರು ಮತಗಟ್ಟೆಯ ವ್ಯಾಪ್ತಿಯ ಮತದಾರರಾಗಿರುವ ತೋಟದಮೂಲೆ‌ ನಿವಾಸಿ ಸಲ್ಮಾನ್ ಹಾಗೂ ಅವರ ಪತ್ನಿ ಮಾಹಿರಾ ಬೇಗಂ ಅವರ ಹೆಸರನ್ನು ಯಾವುದೇ ಮಾಹಿತಿ ನೀಡದೆ ಮತಪಟ್ಟಿಯಿಂದ ಡಿಲೀಟ್ ಮಾಡಿದ ಕ್ರಮವನ್ನು ಖಂಡಿಸಿ ಸಲ್ಮಾನ್ ಅವರ ಸಹೋದರ ಜೈನುದ್ದೀನ್ ತೋಟದಮೂಲೆ‌ ಅವರು ಕಪ್ಪುಪಟ್ಟಿ ಧರಿಸಿ ಮತ ಚಲಾಯಿಸುವ ಮೂಲಕ‌ ಗಮನ ಸೆಳೆದರು.

ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆದ ಬಗ್ಗೆ ತಹಶಿಲ್ದಾರ್ ಅವರಿಗೆ ದೂರು ನೀಡಲಾಗಿತ್ತು. ಆದರೆ ನ್ಯಾಯ ಸಿಕ್ಕಿರಲಿಲ್ಲ. ಹಾಗಾಗಿ ಜೈನುದ್ದೀನ್ ಅವರು ಮತದಾನದ ದಿನವಾದ ಬುಧವಾರ ಸಂಜೆ ಕಪ್ಪು ಪಟ್ಟಿ ಧರಿಸಿ ಪ್ರಜೆಯೊಬ್ಬನ ಹಕ್ಕು‌ ಕಸಿದುಕೊಂಡ ಕ್ರಮದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.

ರಾಜ್ಯ