
ಉಡುಪಿ: ಎಪ್ರಿಲ್ 27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಉಡುಪಿ ಜಿಲ್ಲೆಯ ಕಾಪುವಿಗೆ ಆಗಮಿಸಲಿದ್ದಾರೆ.


ಕಾಪು ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ, ಕಟಪಾಡಿ ಪರಿಸರದಲ್ಲಿ ಸಮಾವೇಶಕ್ಕೆ ಬೇಕಾದ ಸಿದ್ಧತೆಯ ಸಂಬಂಧ ಜಿಲ್ಲಾ ತಂಡ ಇಂದು ರಾತ್ರಿ ತುರ್ತು ಸಭೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿಯವರು ಕೂಡ ಎ. 27ರಂದು ಉಡುಪಿ ಜಿಲ್ಲೆಯ ಕಾಪುವಿಗೆ ಆಗಮಿಸಲಿದ್ದಾರೆ. ಅಂದು ಉಚ್ಚಿಲದಲ್ಲಿ ಮೀನುಗಾರರ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ