ಸಂಪಾಜೆ: ಅಕ್ರಮ ಮರ ಸಾಗಾಟ| ಲಾರಿ ಮತ್ತು ಮರದ ದಿಮ್ಮಿ ಸಹಿತ ಆರೋಪಿ ಬಂಧನ:
ರಾಜ್ಯ

ಸಂಪಾಜೆ: ಅಕ್ರಮ ಮರ ಸಾಗಾಟ| ಲಾರಿ ಮತ್ತು ಮರದ ದಿಮ್ಮಿ ಸಹಿತ ಆರೋಪಿ ಬಂಧನ:

ಕೊಡಗು ಜಿಲ್ಲಾ ಸಂಪಾಜೆ ವಲಯಾರಣ್ಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆ ಸಂಪಾಜೆಯಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹೆಬ್ಬಲಸು ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮಂಗಳೂರು ಅಸೈಗೋಳಿಯ ಮಹಮ್ಮದ್ ಸಪ್ವಾನ್ ಎಂದು ಗುರುತಿಸಲಾಗಿದೆ. ಆರೋಪಿ ಹಾಗೂ ಮರ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಸಂಪಾಜೆ…

ಬೆಳ್ಳಾರೆ ಆಸ್ಪತ್ರೆ ಕಟ್ಟಡ ಕೆಡವುವ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವು.

ಬೆಳ್ಳಾರೆ ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡ ಕೆಡವುತ್ತಿರುವ ವೇಳೆ ಗೋಡೆ ಕುಸಿದು ಕಾರ್ಮಿಕ ಮೃತಪಟ್ಟ ಘಟನೆ ಮಾ. ೬ ರ ಅಪರಾಹ್ನ ಸಂಭವಿಸಿದೆ.ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಹಳೆ ಕಟ್ಟಡ ಕೆಡವುವ ಕಾರ್ಯ ನಡೆಯುತ್ತಿತ್ತು. ಇದರ ಗುತ್ತಿಗೆ ತೆಗೆದುಕೊಂಡವರು ತಮ್ಮ ಕಾರ್ಮಿಕರ ಮುಖಾಂತರ ಇಂದು ಗೋಡೆ…

ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ: ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ.
ರಾಜ್ಯ

ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ: ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ.

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆ ನಡೆಯಿತು.ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಧಾರ್ಮಿಕ ಕ್ಷೇತ್ರಗಳು ಸಮಾಜದ ಮಧ್ಯೆ ಶಾಶ್ವತವಾಗಿ ಉಳಿಯುತ್ತವೆ. ಗ್ರಾಮದ ಐಕ್ಯಮತೆಯಲ್ಲಿ ಧಾರ್ಮಿಕ…

ಸುಳ್ಯದಲ್ಲಿ ಅತ್ಯಧಿಕ ತಾಪಮಾನ ದಾಖಲು:
ರಾಜ್ಯ

ಸುಳ್ಯದಲ್ಲಿ ಅತ್ಯಧಿಕ ತಾಪಮಾನ ದಾಖಲು:

ಜಗತ್ತಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು ದಕ್ಷಿಣ ಕನ್ನಡದಲ್ಲಿ ತಾಪಮಾನ ಭಾರೀ ಏರಿಕೆಯಾಗಿದೆ. ಸುಳ್ಯದಲ್ಲಿ ಉಷ್ಣಾಂಶ 41 ಡಿಗ್ರಿ ಸೆಲ್ಸಿಯೆಸ್ ಮಾ.6 ರಂದು ದಾಖಲಾಗಿದೆ.ಬಿಸಿಲಿನ ಬೇಗೆಗೆ ಪ್ರಾಣಿ ಪಕ್ಷಿಗಳ ಭವಣೆ ಹೇಳತೀರದಾಗಿದೆ, ತಾಪಮಾನ ಪದೇ ಪದೇ ಏರಿಕೆಯಾಗುತ್ತಿರುವ ಬೆನ್ನಲ್ಲೆ ದ ಕ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಳವಳ…

ಉಗ್ರರಿಗೆ ಹಣಕಾಸಿನ ನೆರವು – ಬಂಟ್ವಾಳ ಪುತ್ತೂರಿನ ಹಲವೆಡೆ ಎನ್ಐಎ ದಾಳಿ.
ರಾಜ್ಯ

ಉಗ್ರರಿಗೆ ಹಣಕಾಸಿನ ನೆರವು – ಬಂಟ್ವಾಳ ಪುತ್ತೂರಿನ ಹಲವೆಡೆ ಎನ್ಐಎ ದಾಳಿ.

ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಭಾನುವಾರ ಸಂಜೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರ ಬಿಹಾರದ ಪಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಂಬ್ ಇರಿಸಲು ಯತ್ನಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಬಂಟ್ವಾಳ, ಪುತ್ತೂರಿನಲ್ಲಿ ಹಲವು…

ಪೆರಾಜೆ ಕುಂಬಳಚೇರಿ ದೈವಂಕಟ್ಟು ಮಹೋತ್ಸವ ಸಂಪನ್ನ: ಕಿಕ್ಕಿರಿದು ಸಂಖ್ಯೆಯಲ್ಲಿ ಸೇರಿದ ಭಕ್ತಗಡಣ: ಕುಂಬಳಚೇರಿಯಲ್ಲಿ ಶತಮಾನಗಳ ಬಳಿಕ ದಾಖಲೆಯ ರೀತಿಯಲ್ಲಿ ವಿಜ್ರಂಭಿಸಿದ ಮಹೋತ್ಸವ.
ರಾಜ್ಯ

ಪೆರಾಜೆ ಕುಂಬಳಚೇರಿ ದೈವಂಕಟ್ಟು ಮಹೋತ್ಸವ ಸಂಪನ್ನ: ಕಿಕ್ಕಿರಿದು ಸಂಖ್ಯೆಯಲ್ಲಿ ಸೇರಿದ ಭಕ್ತಗಡಣ: ಕುಂಬಳಚೇರಿಯಲ್ಲಿ ಶತಮಾನಗಳ ಬಳಿಕ ದಾಖಲೆಯ ರೀತಿಯಲ್ಲಿ ವಿಜ್ರಂಭಿಸಿದ ಮಹೋತ್ಸವ.

ಹಲವು ಶತಮಾನಗಳ ಬಳಿಕ ಪೆರಾಜೆ ಗ್ರಾಮದ ಕುಂಬಳಚೇರಿಯ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ ಬಾರೀ ವಿಜ್ರಂಭಣೆಯಿಂದ ನಡೆದು ಇದೀಗ ಸಂಪನ್ನಗೊಂಡಿದೆ. ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವವನ್ನು ಕಣ್ತುಂಬಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕೃತಾರ್ಥರಾಗಿದ್ದಾರೆ . ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ದೈವಗಳ ಕೊಲ ನಡೆಯುವುದರೊಂದಿಗೆಪೆರಾಜೆ…

ಹೊಳೆಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆ.
ರಾಜ್ಯ

ಹೊಳೆಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆ.

ವಿಟ್ಲ: ಹೊಳೆಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾದ ಘಟನೆ ಕರ್ನಾಟಕ- ಕೇರಳದ ಗಡಿಭಾಗದ ಅಡ್ಕಸ್ಥಳದಲ್ಲಿ ವರದಿಯಾಗಿದೆ.ಅಡ್ಕಸ್ಥಳದ ಹೊಳೆಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಧಾರ್ಮಿಕ ಸಭೆ .
ರಾಜ್ಯ

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಧಾರ್ಮಿಕ ಸಭೆ .

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಧಾರ್ಮಿಕ ಸಭೆಯುದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷರಾದ ಹೊನ್ನಪ್ಪ ಕೊಳಂಗಾಯ ರವರ ಅಧ್ಯಕ್ಷತೆಯಲ್ಲಿ ದೈವಸ್ಥಾನ ವಠಾರದಲ್ಲಿ ನಡೆಯಿತು ಉದ್ಘಾಟನೆಯನ್ನು ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರುದೀಪಪ್ರಜ್ವಲನೆಯೊಂದಿಗೆ ನೆರವೇರಿಸಿದರು. ನಂತರ ಆಶೀರ್ವಚನ ನೀಡಿ ಮಾತನಾಡಿ ಕೇರಳದಿಂದ ಬಂದ ಆಚರಣೆ , ಕೊಡಗು…

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯ ಸ್ಥಾಪನೆಗೆ ಸರಕಾರದಿಂದ ಅನುಮೋದನೆ.
ರಾಜ್ಯ

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯ ಸ್ಥಾಪನೆಗೆ ಸರಕಾರದಿಂದ ಅನುಮೋದನೆ.

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ (ಆರ್.ವಿ.ಎಸ್.ಯು)ದ ಸ್ಥಾಪನೆಗೆ ಸರಕಾರದಿಂದ ಅನುಮೋದನೆ ದೊರೆತಿದೆ. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ .ಯವರ ಅಧ್ಯಕ್ಷತೆಯಲ್ಲಿ 15 ಜನರ ಸದಸ್ಯರುಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಸರಕಾರಕ್ಕೆವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾಪನೆಯನ್ನು ತಯಾರು…

ಬ್ಯಾಂಕ್‌ ನಲ್ಲಿ ಇನ್ನು ಐದೇ ದಿನ ಕೆಲಸ!.
ರಾಜ್ಯ

ಬ್ಯಾಂಕ್‌ ನಲ್ಲಿ ಇನ್ನು ಐದೇ ದಿನ ಕೆಲಸ!.

ಮಾರ್ಚ್ 02: ಸದ್ಯದಲ್ಲೇ ದೇಶದ ಬ್ಯಾಂಕಿಂಗ್‌ ವಲಯದ ಕೆಲಸದ ಅವಧಿಯಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು, ವಾರಕ್ಕೆ ಐದೇ ದಿನ ಕೆಲಸದ ವ್ಯವಸ್ಥೆ ಜಾರಿಯಾಗಲಿದೆ!ಈಗಾಗಲೇ ಭಾರತೀಯ ಬ್ಯಾಂಕ್‌ ಅಸೋಸಿಯೇಶನ್‌ ಮತ್ತು ಯುನೈಟೆಡ್‌ ಫೋರಮ್‌ ಆಫ್ ಬ್ಯಾಂಕ್‌ ಎಂಪ್ಲಾಯೀಸ್‌ ನಡುವೆ ಮಾತುಕತೆ ಆರಂಭವಾಗಿದೆ. ಮೂಲಗಳು ಹೇಳಿರುವಂತೆ ಬ್ಯಾಂಕ್‌ ಅಸೋಸಿಯೇಶನ್‌, ವಾರದಲ್ಲಿ ಐದು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI