
ಸುಳ್ಯ:ವಿಧಾನ ಸಭೆ ಚುನಾವಣೆಯಾಗಿದೆ ಹಿನ್ನಲೆಯಲ್ಲಿ ಮಾ ೨೯ ರಿಂದಲೇ ನೀತಿ ಸಂಹಿತೆ ಜಾರಿಮಾಡಲಾಗಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಸಂಹಿತೆಯನ್ನು ಎಲ್ಲಾ ಪಕ್ಷದವರು ಪಾಲಿಸಬೇಕು ತಪ್ಪಿದಲ್ಲಿ ಕ್ರಮಗಳನ್ನೂ ಕೈಗೊಳ್ಳಲಾಗುವುದು , ಹಾಗೂ ಇಲಾಖೆಯಿಂದ ಚುನಾವಣಾ ಪೂರ್ವ ತಯಾರಿ ಪೂರ್ಣ ವಾಗಿದೆ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅರುಣ್ ಕುಮಾರ್ ಹೇಳಿದ್ದಾರೆ. ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಚುನಾವಣಾ ಸಂಬಂಧಿ ಸಭೆಯಲ್ಲಿ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿ ‘ಸಿವಿಜಿಲ್’ ಆಪ್ ಮೂಲಕ ಹಾಗು ಚುನಾವಣಾ ಪ್ರಚಾರ ಸಭೆ ಮತ್ತಿತರ ಅನುಮತಿಗಳಿಗಾಗಿ ‘ಸುವಿಧಾ’ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು .ಮತ್ತು ಚುನಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ದ ಸಾರ್ವಜನಿಕರು ದೂರು ನೀಡುವುದಾದಲ್ಲಿ 08257 231231 ಅಥವಾ 9916326521. ಸಂಖ್ಯೆಗೆ ದೂರವಾಣಿ ಕರೆ ಮಾಡುವುದರ ಮೂಲಕವು ತಿಳಿಸಬಹುದಾಗಿದೆ.ಈ ಬಾರಿ ಮೊತ್ತಮೊದಲ ಬಾರಿಗೆ ವಯಸ್ಕರಿಗೆ ಹಾಗು ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶವಿದ್ದು, ಪೋಸ್ಟಲ್ ವೋಟು ಮಾಡಲು ಅರ್ಹವಾಗಿರುವ. 4000 ಮಂದಿಗೆ ಸಹಕರಿಸಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದರು.



ಚೆಕ್ ಪೋಸ್ಟ್ ತಪಾಸಣೆ ಇನ್ನಷ್ಟು ಬಿಗಿ
ಈಗಾಗಲೆ ಸುಳ್ಯ ಕ್ಷೇತ್ರಕ್ಕೆ ಸಂಭಂದಿಸಿದಂತೆ ಆರು ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ಆಲೆಟ್ಟಿ, ಮಂಡೆಕೋಲು ಹಾಗು ಜಾಲ್ಸೂರು ಮತ್ತು ಇತರ ಜಿಲ್ಲೆಯ ಗಡಿಯಾದ ಸಂಪಾಜೆ ಹಾಗು ಗುಂಡ್ಯ ಹಾಗೂ ಸುಬ್ರಹ್ಮಣ್ಯ ಗುಂಡ್ಯ ಭಾಗದಲ್ಲೂ ಚೆಕ್ ಪೋಸ್ಟ್ ತೆರೆಯಲಾಗಿದೆ. ಇಲ್ಲಿ ಪೊಲೀಸ್ ಮತ್ತು ಇತರ ಅಧಿಕಾರಿಗಳ ತಂಡ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಭಯ ರಹಿತ ಮತದಾನಕ್ಕೆ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಲಾಗಿದ್ದು,, ಚುನಾವಣಾ ಭದ್ರತಾ ವ್ಯವಸ್ಥೆಗೆ ಹೆಚ್ಚುವರಿ ಭದ್ರಾತಾ ಪಡೆಗಳು ಕ್ಷೇತ್ರಕ್ಕೆ ಆಗಮಿಸಲಿದೆ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದಕ್ಕೆ ಯಾವುದೇ ನಿರ್ಭಂದ ಇಲ್ಲಾ, ಆದರೆ ಅಲ್ಲಿ ರಾಜಕೀಯ ಪ್ರಚಾರಕ್ಕೆ ಅವಕಾಶ ಇಲ್ಲ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನಡೆಸುವ ಪ್ರಚಾರ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ ಮತ್ತು ಚುನಾವಣಾ ವೆಚ್ಚವನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.

201976 ಮತದಾರರು ,231 ಮತ ಕೇಂದ್ರಗಳು
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 231 ಮತ ಕೇಂದ್ರಗಳಿವೆ, ಸುಳ್ಯ ತಾಲೂಕಿನಲ್ಲಿ 119 ಹಾಗು ಕಡಬ ತಾಲೂಕಿನಲ್ಲಿ 112 ಮತಗಟ್ಟೆಗಳಿವೆ. ಗ್ರಾಮಾಂತರಲ್ಲಿ 208 ಹಾಗು ನಗರ ವ್ಯಾಪ್ತಿಯಲ್ಲಿ 23 ಮತಗಟ್ಟೆಗಳಿವೆ. 28 ಸೂಕ್ಷ್ಮ ಹಾಗು ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ವೀಡಿಯೋ ಚಿತ್ರಿಕರಣದ ಮೂಲಕ ಸೂಕ್ತ ಭದ್ರತಾ ವ್ಯವಸ್ಥೆ ಕಾಯ್ದುಕೊಳ್ಳಲಾಗುವುದು ಕ್ಷೇತ್ರದಲ್ಲಿ 1,00,021 ಪುರುಷ ಹಾಗು 1,01,955 ಮಹಿಳಾ ಮತದಾರರು ಸೇರಿ ಒಟ್ಟು 2,01,976 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಏ.13 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.ಏ.20 ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.21 ರಂದು ಪರಿಶೀಲನೆ ನಡೆಯಲಿದೆ. 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ.10 ರಂದು ಚುನಾವಣೆ ನಡೆಯಲಿದ್ದು ಮೇ.13 ರಂದು ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.

ಮತದಾನ ಪ್ರಮಾಣ ಹೆಚ್ಚು ಮಾಡಲು ಎಲ್ಲೆಡೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಮತದಾನ ಬಹಿಷ್ಕಾರ ಬ್ಯಾನರ್ ಹಾಕಿದವರ ಜೊತೆ ಮಾತುಕತೆ ನಡೆಸಿ ಮತದಾನಕ್ಕೆ ಪ್ರೇರೇಪಿಸಲಾಗುವುದು ಎಂದು ಹೇಳಿದರು.

ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ಕಡಬ ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದರು.