ಭಜನೆ ಮತ್ತು ಭಜಕರ ವಿರುದ್ಧ ನಿಂದಾನಾತ್ಮಕ ಬರಹ ಹರಿಯ ಬಿಟ್ಟ ಅಧಿಕಾರಿ ಅಮಾನತು.

ಭಜನೆ ಮತ್ತು ಭಜಕರ ವಿರುದ್ಧ ನಿಂದಾನಾತ್ಮಕ ಬರಹ ಹರಿಯ ಬಿಟ್ಟ ಅಧಿಕಾರಿ ಅಮಾನತು.


ಸಾಮಾಜಿಕ ಜಾಲತಾಣದಲ್ಲಿ ಭಜಕರ ಬಗ್ಗೆ ನಿಂದನೆ, ಹಿರೇಬಂಡಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಉಢಾಪೆಯಾಗಿ ವರ್ತಿಸಿದ ಕೊಯಿಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಂಜೀವ ಪೂಜಾರಿಯವರು ಹಲವಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ತಿಂಗಳುಗಳ ಹಿಂದೆ ಭಜಕರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು ಇದರ ವಿರುದ್ದ ಬಜರಂಗದಳದ ಕಾರ್ಯಕರ್ತರು ಇವರ ಅಮಾನತಿಗೆ ಒತ್ತಾಯಿಸಿ ಬೀದಿಗೆ ಇಳಿದಿದ್ದರು.

ರಾಜ್ಯ