ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದು ಪುತ್ತೂರಿನ ಜಯೇಶ್.

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದು ಪುತ್ತೂರಿನ ಜಯೇಶ್.

ಮುಂಬಯಿ ಜನವರಿ 15: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದು ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜಯೇಶ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಎನ್ನುವುದು ತಿಳಿದು ಬಂದಿದೆ.
ಜಯೇಶ್‌ ಕುಮಾರ್‌ ಪುತ್ತೂರಿನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದಾನೆ. ಈ ಹಿಂದೆ ಜೈಲಿನಲ್ಲೇ ಇದ್ದುಕೊಂಡು ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೂ ಜೀವ ಬೆದರಿಕೆ ಕರೆಯನ್ನು ಮಾಡಿದ್ದ. ಆರೋಪಿಯ ಬಳಿ ಡೈರಿಯೊಂದು ಪತ್ತೆಯಾಗಿದ್ದು, ಈ ಡೈರಿಯಲ್ಲಿ ನಿನ್ನೆ ಸಚಿವರ ಕಚೇರಿಗೆ ಹೇಳಿದ್ದ ನಂಬರ್‌ ಸೇರಿದಂತೆ ಹಲವು ನಂಬರ್‌ ಗಳಿವೆ. ಸದ್ಯ ಡೈರಿ ವಶಕ್ಕೆ ಪಡೆದಿದ್ದು, ಮೊಬೈಲ್‌ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಜೈಲಿನಲ್ಲಿ ಅಕ್ರಮವಾಗಿ ಫೋನ್‌ ಬಳಸಿ ಜಯೇಶ್‌ ಕುಮಾರ್ ಈ ಕೃತ್ಯವನ್ನು ಎಸಗಿದ್ದಾನೆ. ನಾಗ್ಪುರ ಪೊಲೀಸರು ತನಿಖೆಗಾಗಿ ಬೆಳಗಾವಿಗೆ ತೆರಳಿದ್ದಾರೆ. ಆರೋಪಿಯನ್ನು ಪ್ರೊಡಕ್ಷನ್ ರಿಮಾಂಡ್‌ ನೀಡಲು ಕೇಳಿಕೊಂಡಿದ್ದೇವೆ ಎಂದು ನಾಗ್ಪುರ ಪೊಲೀಸ್ ಆಯುಕ್ತರು ಅಮಿತೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯ