
ಆದಿಚುಂಚನಗಿರಿ ಕ್ಷೇತ್ರದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78 ನೇ ಜಯಂತ್ಯೋತ್ಸವ ಸಂಸ್ಮರಣ ಕಾರ್ಯಕ್ರಮ ಜ.22 ರಂದು ಪುತ್ತೂರಿ ಮಹಾಲಿಂಗೇಶ್ವರ ಗದ್ದೆಯಲ್ಲಿ ನಡೆಯಲಿದ್ದು ಈ ಸ್ಮರಣೀಯ ಕಾರ್ಯಕ್ರಮದಲ್ಲಿ 75000 ಜನ ಸೇರುವ ನಿರೀಕ್ಷೆ ಇದ್ದು ಸುಳ್ಯದಿಂದ 15 ರಿಂದ20 ಸಾವಿರದ ವರೆಗೆ ಸಮುದಾಯ ಭಾಂಧವರು ಮತ್ತು ಮಠದ ಸದ್ಬಕ್ತರು ಭಾಗವಹಿಸಲಿದ್ದಾರೆ,ಎಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ತಿಳಿಸಿದ್ದಾರೆ.



ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ವಿಷಯ ತಿಳಿಸಿದರು.
ಜ.22 ರ ಭಾನುವಾರದಂದು ಪುತ್ತೂರಿನ
ಮಹಾಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಡಾ. ಬಾಲಗಂಗಾಧರನಾಥ ಮಹಾಸ್ವಾಮಿ ಅವರ 78 ನೇ ಜಯಂತ್ಯೋತ್ಸವ ಸಂಸ್ಮರಣ ಕಾರ್ಯಕ್ರಮ ಹಾಗೂ ಮಂಗಳೂರು ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿರುವ ಮಹಾಪ್ರಬಂಧದ ಸಂಸ್ಕೃತ – ಸಂಸ್ಕೃತಿಗೆ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುವುದು. ಹಾಗೂ ಆದಿಚುಂಚನಗಿರಿ ಮಠದ ಈಗಿನ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಪೀಠಾಧ್ಯಕ್ಷರಾಗಿ ೧೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅವರನ್ನುಗೌರವಿಸಲಾಗುವುದು ಎಂದು ಹೇಳಿದರು
ಕಾರ್ಯಕ್ರಮಕ್ಕೂ ಮೊದಲು ಪುತ್ತೂರಿನ ದರ್ಬೆಯಿಂದ ಸಮಾರಂಭ ನಡೆಯುವ ಜಾತ್ರಾ ಮೈದಾನಕ್ಕೆ ಅದ್ದೂರಿ ಮೆರವಣಿಗೆ ನಡೆಯುವುದು. ಈ ಮೆರವಣಿಗೆಯಲ್ಲಿ ಸುಳ್ಯದಿಂದ 3 ಟ್ಯಾಬ್ಲೊ ಭಾಗವಹಿಸುವುದು. ಇದರಲ್ಲಿ ಸುಳ್ಯ ಗೌಡರ ಯುವ ಸೇವಾ ಸಂಘ, ದ.ಕ. ಗೌಡ ವಿದ್ಯಾಸಂಘ, ಹಾಗೂ ಎ.ಒ.ಎಲ್.ಇ. ಅಧ್ಯಕ್ಷರಾದ ಡಾ| ಕೆ.ವಿ. ಚಿದಾನಂದರು ಪ್ರಾಯೋಜಕತ್ವದ ಟ್ಯಾಬ್ಲೊ ಇರಲಿದೆ . ಜ.22 ಬೆಳಿಗ್ಗೆ ಪುತ್ತೂರಿನ ದರ್ಬೆಯಿಂದ ಈ ಟ್ಯಾಬ್ಲೊ ಮೆರವಣಿಗೆ ಇರಲಿದೆ ಎಂದು ಹೇಳಿದರು

.ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿ ಡಾ| ನಿರ್ಮಲಾನಂದ ಸ್ವಾಮೀಜಿಯವರು 10 ವರ್ಷ ಪೂರೈಸಿರುವುದರಿಂದ ಅವರಿಗೆ ತುಲಾಭಾರ ಮಾಡಲಾಗುವುದು. ಇದಕ್ಕೆ ತಾಲೂಕಿನಿಂದ 20 ಕೆ.ಜಿ. ಬೆಳ್ಳಿ ನೀಡಲಾಗುತ್ತದೆ.

ಸುಳ್ಯದಿಂದ ಹಸರುವಾಣಿ ಸಮರ್ಪಣೆ
ನಡೆಯಲಿದೆ. ಜ.21 ರಂದು ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಬಳಿಯಿಂದ 150 ಜೀಪುಗಳಲ್ಲಿ ಈ ಭಾಗದಲ್ಲಿ ಬೆಳೆಯುವ ಅಡಿಕೆ, ತೆಂಗು ಇತ್ಯಾದಿ ವಸ್ತುಗಳನ್ನು ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮ, ಪ್ರಮುಖರಾದ ದಿನೇಶ್ ಮಡಪ್ಪಾಡಿ, ಡಾ| ಎನ್.ಎ. ಜ್ಞಾನೇಶ್ ಮೊದಲಾದವರಿದ್ದರು.