ಸುಬ್ರಹ್ಮಣ್ಯ: ಹಲ್ಲೆ ಪ್ರಕರಣ ಸಂಭಂದಿಸಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಪ್ರತಿಭಟನೆಗೆ ಸಿದ್ಧತೆ..?

ಸುಬ್ರಹ್ಮಣ್ಯ: ಹಲ್ಲೆ ಪ್ರಕರಣ ಸಂಭಂದಿಸಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಪ್ರತಿಭಟನೆಗೆ ಸಿದ್ಧತೆ..?


ಸುಬ್ರಹ್ಮಣ್ಯ: ಹಿಂದೂ ಅಪ್ರಾಪ್ತ ಬಾಲಕಿಯನ್ನು ಭೇಟಿಯಾಗಲು ಸುಭ್ರಹ್ಮಣ್ಯ ಬಂದ ಮುಸ್ಲಿಂ ಹುಡುಗನಿಗೆ ಥಳಿತ ಪ್ರಕರಣಕ್ಕೆ ಸಂಭಂದಿಸಿ ಇತ್ತಂಡಗಳಿಂದ ದೂರು ಸಲ್ಲಿಕೆಯಾಗಿದ್ದು ಪ್ರಕರಣ ದಾಖಲಾಗಿದೆ, ಕಲ್ಲುಗುಂಡಿಯ ಮುಸ್ಲಿಂ ಯುವಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ನಡೆಸಿದವರ ಮೇಲೆ ದೂರು ನೀಡಿದ್ದರೆ . ಅಪ್ರಾಪ್ತ ಬಾಲಕಿಯ ತಂದೆ ಏನೂ ಅರಿಯದ ಅಪ್ರಾಪ್ತ ಬಾಲಕಿಯನ್ನು ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಯುವಕನ ವಿರುದ್ದ ದೂರು ನೀಡಿದ್ದಾರೆ, ಇದೀಗ ಎರಡೂ ಕೇಸುಗಳು ದಾಖಲಾಗಿದ್ದು,ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುತಿರುವ ಪೋಲಿಸ್ ಅಧಿಕಾರಿಗಳು, ಮಾನಭಂಗಕ್ಕೆ ಯತ್ನಿಸಿದವರ ಮೇಲೆ ಏನೂ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ದಿಢೀರ್ ಪ್ರತಿಭಟನೆಗೆ ಸಿದ್ದತೆ ಮಾಡತೊಡಗಿದ್ದು ಜ.7 ರಂದು ಸುಭ್ರಹ್ಮಣ್ಯ ಪೋಲಿಸರು ಮತ್ತು ಸುಳ್ಯ ತಾಲೂಕು ವೃತ್ತನಿರೀಕ್ಷರ ವಿರುದ್ದ ಪೋಲಿಸರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿ, ದೇವಸ್ಥಾನದಂತ ಪವಿತ್ರ ಕ್ಷೇತ್ರದಲ್ಲಿ ಅನ್ಯಕೊಮಿನವರು ಮಾರುವೇಷದಲ್ಲಿ ಬಂದು ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ , ಆದರೂ ಪೋಲಿಸ್ ಇಲಾಖೆ ಇದನ್ನು ಹತ್ತಿಕ್ಕಲು ವಿಫಲವಾಗಿದೆ ಎಂದು ಇಲಾಖೆಯ ವಿರುದ್ದ ಆರೋಪಿಸಿ ಶನಿವಾರ 10.30 ಕ್ಕೆ ಪ್ರತಿಭಟನೆಗೆ ಹಿಂದೂ ಸಂಘಟನೆ ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಮದ್ಯೆ ರಾತ್ರಿ11 ರ ವೇಳೆ ಸುಬ್ರಹ್ಮಣ್ಯ ಠಾಣೆಗೆ ಬೇಟಿ ನೀಡಿದ ಡಿ ವೈ ಎಸ್ ಪಿ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ