
ಬೆಳ್ಳಾರೆಯ ಯುವ ಉದ್ಯಮಿ ನವೀನ್ ಕಾಮಧೇನು
ಅವರನ್ನು ಆಂಬ್ಯುಲೆನ್ಸ್ ನಲ್ಲಿ ಬಲಾತ್ಕಾರವಾಗಿ
ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಎಂ.ಮಾಧವ ಗೌಡ, ದಿವ್ಯಪ್ರಭ ಚಿಲ್ತಡ್ಕ ಸೇರಿದಂತೆ 6 ಮಂದಿಯ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುವುದಾಗಿ ತಿಳಿದು ಬಂದಿದೆ.


ಘಟನೆ ವಿವರ
ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರತಿಷ್ಠಿತ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಗೌಡ ಕಾಮಧೇನು ಅವರನ್ನು ಆಂಬ್ಯುಲೆನ್ಸ್ ಸಹಿತ ಕೆಲವು ವಾಹನಗಳಲ್ಲಿ ಬಂದ ಅಪರಿಚಿತರ ತಂಡವೊಂದು ಬಲವಂತವಾಗಿ ಕರೆದೊಯ್ದ ಪ್ರಕರಣ:, ಆತನನ್ನು ಅಪಹರಿಸಲಾಗಿದೆ ಎಂದು ನವೀನ್ ತಾಯಿ ಆರೋಪಿಸಿದ್ದರು . ಈ ಅಂಬ್ಯುಲೆನ್ಸನ್ನು ಸಾರ್ವಜನಿಕರ ತಂಡವೊಂದು ಕೊಡಗಿನ ಶುಂಠಿಕೊಪ್ಪ ಬಳಿ ತಡೆ ಹಿಡಿದು ಪೊಲೀಸರಿಗೆ ಒಪ್ಪಿಸಿತ್ತು, ನವೀನ್ ಕದ್ದೋಯ್ದ ಪ್ರಕರಣ ನಡೆದಂತೆ ನವೀನ್ ಸಹೋದರ ವಿನ್ಯಾಸ್ ಹಾಗೂ ಅವರ ಗೆಳೆಯರು ಕರೆದೊಯ್ದ ಅಂಬ್ಯುಲೆನ್ಸ್ ಜಾಡು ಕಂಡುಹಿಡಿದ್ದಿದ್ದರು.ಘಟನೆಯ ಸಂದರ್ಭದಲ್ಲಿ ನವೀನರ ತಾಯಿ ಮತ್ತು ಅತ್ತಿಗೆ ಪ್ರಜ್ಞಾ ಗಾಯಗೊಂಡಿದ್ದು, ಅವರಿಬ್ಬರೂ ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನನ್ನು ನನ್ನ ಅತ್ತೆ ಹಾಗೂ ಪತ್ನಿ ಹಾಗೂ ಅವರ ಜನರು ಅಪಹರಣ ಮಾಡಿದ್ದಾರೆ. ಎಂದು ನವೀನ್ ಅವರು ಮಾಧ್ಯಮಗಳ ಮುಂದೆ ಆರೋಪಿಸಿದ್ದರು.
ಡಿ.19ರಂದು ಮಧ್ಯಾಹ್ನ ಬೆಳ್ಳಾರೆಯಿಂದ ಹಿಂತಿರುಗಿದ ನವೀನ್ ತನ್ನ ಮನೆಯಂಗಳದಲ್ಲಿ ನಿಂತುಕೊಂಡಿರುವಾಗ ಅಂಬ್ಯುಲೆನ್ಸ್‌ನಲ್ಲಿ ಮತ್ತು ಇತರ ಕಾರುಗಳಲ್ಲಿ ಬಂದ ಕೆಲವರು ಅವರನ್ನು ಬಲಾತ್ಕಾರವಾಗಿ ಕಾರಿಗೆ ಕೂರಿಸಲು ಕೊಂಡೊಯ್ದರೆಂದೂ ಇದನ್ನು ಕಂಡ ತಾಯಿ ನೀರಜಾ ಮತ್ತು ಅತ್ತಿಗೆ ಪ್ರಜ್ಞಾ ತಡೆಯಲು ಬಂದರೆಂದು ಆ ಸಂದರ್ಭ ಅವರ ಮಧ್ಯೆ ಸಂಘರ್ಷ ನಡೆದು ಅಪರಿಚಿತರು ನವೀನರನ್ನು ವಾಹನದಲ್ಲಿ ಕೂರಿಸಿಕೊಂಡು ಹೋದರೆಂದೂ ನವೀನ್ ಹಾಗೂ ನವೀನ್ ತಾಯಿ ನೀರಜಾ ಹಾಗೂ ಅತ್ತಿಗೆ ಪ್ರಜ್ಞಾ ಒಂದೇ ರೀತಿ ಹೇಳಿದ್ದಾರೆ.ಆ ಬಳಿಕ ಘಟನೆಯಲ್ಲಿ ಗಾಯಗೊಂಡ ತಾಯಿ ನೀರಜಾ ಹಾಗೂ ಅಣ್ಣ ವಿನ್ಯಾಸ್ ಬೆಳ್ಳಾರೆ ಪೋಲೀಸರಿಗೆ ವಿಷಯ ತಿಳಿಸಿದಾಗ ಪೋಲಿಸರಿಂದ ನೀರಸ ಪ್ರತಿಕ್ರೀಯೆ ದೊರಕಿತ್ತು ಎಂದು ಮನೆಯವರು ತಿಳಿಸಿದ್ದರು. ಬಳಿಕ ಅವರು ಸುಳ್ಯ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಈ ಮದ್ಯೆ ವಿನ್ಯಾಸ್ ಗೆಳೆಯರು ನವೀನ್ ರನ್ನು ಶುಂಠಿ ಕೊಪ್ಪದಲ್ಲಿ ಪತ್ತೆ ಮಾಡಿದ್ದರು ಘಟನೆ ವಿವಿಧ ಮಾಧ್ಯಮ ಮತ್ತು ಜಾಲತಾಣದಲ್ಲಿ ಬಿತ್ತರವಾಗತೊಡಗಿತ್ತು, ಈ ಸಂದರ್ಭದಲ್ಲಿ ನವೀನ್ ತಂದೆಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದಾಗ ಅವರು ಅಂತಹ ಯಾವ ಘಟನೆ ನಡಿಯಲಿಲ್ಲ ನವೀನ್ ಮದ್ಯವ್ಯಸನಿಯಾಗಿದ್ದ ಹಾಗಾಗಿ ಆಸ್ಪತ್ರೆ ಸೇರಿಸಲು ಕೊಂಡಯ್ಯಲಾಗಿದೆ ಎಂದು ಹೇಳಿ ಕೊಂಡಿದ್ದರು
ಮತ್ತೆ ಠಾಣೆಯಲ್ಲಿ ದೂರು.
.ಆದರೆ ನವೀನ್ ಅವರ ತಾಯಿ ನೀರಜಾಕ್ಷಿಯವರು ಬೆಳ್ಳಾರೆ ಠಾಣೆಯಲ್ಲಿ ಮತ್ತೆ ದೂರು ನೀಡಿದ್ದು ದೂರಿನಲ್ಲಿ ” ಮಗ ನವೀನ್ ಕುಮಾರ್ ಹಾಗೂ ಆತನ ಪತ್ನಿ ಸ್ಪಂದನಳ ಮಧ್ಯೆ ಸುಮಾರು 3 ತಿಂಗಳಿಂದ ವೈಮನಸ್ಸು ಉಂಟಾಗಿ ಸ್ಪಂದನಳು ತವರು ಮನೆಗೆ ಹೋಗಿದ್ದು, ಡಿ.18 ರಂದು ಸೊಸೆ ಸ್ಪಂದನ ,ಆಕೆಯ ಹೆತ್ತವರಾದ ಪರಶುರಾಮ, ದಿವ್ಯಪ್ರಭಾ ಚಿಲ್ತಡ್ಕ, ತಮ್ಮ ಸ್ಪರ್ಶಿತ್ ಹಾಗೂ ಸಂಬಂಧಿಕರು ಬಂದು ಮಾತುಕತೆ ಮಾಡಿದ್ದು ಆ ವೇಳೆ ನವೀನ್ ಕುಮಾರ್ ಪತ್ನಿ ಸ್ಪಂದನಳು ಬೇಡ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಇದೇ ಕಾರಣದಿಂದ ಡಿ.19 ರಂದು ಮಾಧವ ಗೌಡ, ಸೊಸೆ ಸ್ಪಂದನ, ಸೊಸೆಯ ತಾಯಿ ದಿವ್ಯಪ್ರಭಾ ಚಿಲ್ತಡ್ಕ, ತಂದೆ ಪರಶುರಾಮ, ತಮ್ಮ ಸ್ಪರ್ಶಿತ್ ನವೀನ್ ರೈ ತಂಬಿನಮಕ್ಕಿ ಎಂಬವರು ನವೀನ್ ಕುಮಾರ್ ನನ್ನು ಅಪಹರಿಸುವ ಉದ್ದೇಶದಿಂದ ಒಟ್ಟುಕುಮಾರ್ ನನ್ನು ಅಪಹರಿಸುವ ಉದ್ದೇಶದಿಂದ ಒಟ್ಟು ಸೇರಿ ಬೆಳ್ಳಾರೆ ಗ್ರಾಮದ ಕಾವಿನಮೂಲೆ ಎಂಬಲ್ಲಿನ ಮನೆಬಳಿ ಕೈ ಕಾಲು ಕಟ್ಟಿ ಅಂಬ್ಯುಲೆನ್ಸ್ ವಾಹನದಲ್ಲಿ ಎಲ್ಲಿಗೋ ಅಪಹರಿಸಿಕೊಂಡು ಹೋಗಿದ್ದು ಆ ವೇಳೆ ತಡೆಯಲು ಹೋದ ನಮ್ಮನ್ನು ಹೊಡೆದು,ಕಾಲಿನಿಂದ ತುಳಿದು ನೋವು ಉಂಟು ಮಾಡಿದ್ದು ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೇವೆ ” ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ಪೋಲೀಸರು ಮಾಧವ ಗೌಡ,
ದಿವ್ಯಪ್ರಭಾ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್,
ನವೀನ್ ರೈ ತಂಬಿನಮಕ್ಕಿ ಎಂಬವರ ಮೇಲೆ ಕೇಸು
ದಾಖಲಿಸಿದ್ದಾರೆ.