ಪೆರಾಜೆ ಅಮಚೂರು ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ-ನಾಗಬ್ರಹ್ಮ ದೇವಸ್ಥಾನದಲ್ಲಿ ಕೊರಗ ತನಿಯ ದೈವದ ಕೋಲ‌ ಮತ್ತು ಅಗೆಲು ಸೇವೆ.

ಪೆರಾಜೆ ಅಮಚೂರು ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ-ನಾಗಬ್ರಹ್ಮ ದೇವಸ್ಥಾನದಲ್ಲಿ ಕೊರಗ ತನಿಯ ದೈವದ ಕೋಲ‌ ಮತ್ತು ಅಗೆಲು ಸೇವೆ.

ಸುಂದರ ತಾಣವಾಗಿಯೂ.. ಪ್ರೇಕ್ಷಣೀಯ ತಾಣವಾಗಿಯೂ .ಚಾರಣಾ ತಾಣವಾಗಿಯೂ ಧಾರ್ಮಿಕವಾಗಿಯೂ ಗುರುತಿಸಿಕೊಂಡಿರು ಸ್ಥಳ ಬೆಟ್ಟದಪುರ.ಎತ್ತರದ ಬೆಟ್ಟವನ್ನು ಏರಿ ಹೋದರೆ ಸಿಗುವುದೇ ಬೆಟ್ಟಪುರ ಕ್ಷೇತ್ರ ಅಲ್ಲಿ ಸುಮಾರು.101 ಮೆಟ್ಟಿಲು ಹತ್ತಿದರೆ ಗೋಚರವಾಗುವು ಗುಡಿಯೇ ಶ್ರೀ ದುರ್ಗಾ ಮಹಕಾಳಿ ದೇವಿಯ ಸಾನಿಧ್ಯ ಮತ್ತು ನಾಗಭ್ರಹ್ಮ ದೇವಸ್ಥಾನವಿದೆ.ಪ್ರತಿನಿತ್ಯ ತಾಲೋಕು ಜಿಲ್ಲೆ ಸೇರಿದಂತೆ ಹೊರಭಾಗದಿಂದ ನೂರಾರು ಭಕ್ತರು ಪ್ರತಿನಿತ್ಯ ಬರುತ್ತಿದ್ದು ತಮ್ಮ ಕಷ್ಟ ನಷ್ಟಗಳಿಗೆ ಪರಿಹಾರ ಕಂಡುಕೊಂಡ ಉದಾಹರಣೆಗಳು ಸಾಕಷ್ಟಿವೆ..


ಹೌದು.. ಮಡಿಕೇರಿ ತಾಲೋಕಿನ ಪೆರಾಜೆ ಗ್ರಾಮದ ಅಮಚೂರು ಎಂಬಲ್ಲಿರುವ ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ-ನಾಗಬ್ರಹ್ಮ ದೇವಸ್ಥಾನ ಈ ಪುಣ್ಯ ಕ್ಷೇತ್ರ.ಇಲ್ಲಿ ಕ್ಷೇತ್ರ ಪಾಲ ಕೊರಗ ತನಿಯ ದೈವದ ಕಟ್ಟೆಯಿದ್ದು.ಡಿ.18 ರಂದು ಕೊರಗ ತನಿಯ ಕೋಲ‌ ಮತ್ತು ಅಗೆಲು ಸೇವೆ ನಡೆಯಿತು. ಸಂಜೆ ಘಂಟೆ 7 ರಿಂದ ಕೋಲ ಆರಂಭಗೊಂಡು, ರಾತ್ರಿ 9 ರಿಂದ ಸಾರ್ವಜನಿಕ ರಾಶಿ ಅಗೇಲು ಸೇವೆ , ಪ್ರಸಾಧ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು, 500 ಕ್ಕೂ ಮಿಕ್ಕಿದ ಭಕ್ತಾದಿಗಳು ಪಾಲ್ಗೊಂಡು ದೈವಕ್ಕೆ ಹೂ, ಹಿಂಗಾರ, ತುಳಸಿ ,ಎಣ್ಣೆ, ಇನ್ನಿತರ ಹರಿಕೆಗಳನ್ನು ಸಮರ್ಪಿಸಿದರು, ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಲೋಲಾಕ್ಷ ಬೆಟ್ಟದಪುರ, ಮೊಕ್ತೇಸರರಾದ ಸುಕುಮಾರ, ಅಭಿವೃದ್ದಿ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತಿಯಿದ್ದರು.

ರಾಜ್ಯ