
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ಈ ಸಂದರ್ಭದಲ್ಲಿ, ಮುಂದಿನ ವರ್ಷದ ಕರ್ನಾಟಕ ಹಾಗೂ ಇತರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯವಾಗಿ, ಪಕ್ಷ ಬಲ ಗೊಳಿಸುವ ವಿಷಯವನ್ನೂ ಒಳಗೊಂಡಂತೆ, ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಿತಿ ಸಭೆಗೆ, ಕರ್ನಾಟಕ ರಾಜ್ಯದಿಂದ, ರಾಷ್ಟ್ರೀಯ ಸಮಿತಿ ಸದಸ್ಯರಾಗಿ 2021 ರಲ್ಲಿ ಆಯ್ಕೆಯಾದ ಒಟ್ಟು 10 ಸದಸ್ಯರಲ್ಲಿ ಓರ್ವರಾದ ಅಶೋಕ ಎಡಮಲೆ, ಡಿಸೆಂಬರ್ 18,2022 ಭಾನುವಾರದಂದು ಭಾಗವಹಿಸಲಿದ್ದಾರೆ. ಅಶೋಕ ಎಡಮಲೆ ಅವರು 2016 ರಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಸಂಚಾಲಕರಾಗಿ, 2019 ರಿಂದ ಎಎಪಿಯ ಯುವ AYW ಮತ್ತು ವಿದ್ಯಾರ್ಥಿ ಸಂಘಟನೆ CYSS ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, 2021 ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ




ವೀಕ್ಷಕರಾಗಿ ಹಾಗೂ 2022 ರಲ್ಲಿ ಉಡುಪಿ, ದಕ್ಷಿಣ ಕನ್ನಡ & ಉತ್ತರ ಕನ್ನಡ ಜಿಲ್ಲೆಗಳು ಒಳಗೊಂಡ, ವಲಯ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಘಟಕವನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ, ಪಕ್ಷವನ್ನು ರಾಜ್ಯ ದೃಶ್ಯ ಮಾಧ್ಯಮದಲ್ಲಿ ಪ್ರತಿನಿಧಿಸಿದ್ದರು.
ವಿಪ್ರೊ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಇವರು ರಾಜಿನಾಮೆ ನೀಡಿ 2015 ರಿಂದ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಕೃಷಿಕರಾಗಿದ್ದಾರೆ,

