
ಸುಳ್ಯ ಪೇಟೆಯ ಶಿಕ್ಷಣ ಸಂಸ್ಥೆ ಬಳಿ ವ್ಯಕ್ತಿಯೊಬ್ಬರು ಶಂಕಾಸ್ಪದ ರೀತಿಯಲ್ಲಿ ಕಾಣಿಸಿಕೊಂಡಿದ್ದು ಇದು ಶಿಕ್ಷಣ ಸಂಸ್ಥೆ ಮತ್ತು ಪೋಷಕರ ಆತಂಕಕ್ಕೆ ಕಾರಣವಾಗಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ವಿಭಾಗದ ಬಳಿಯಲ್ಲಿ ಗೇಟಿನ ಹೊರಗೆ ಗಡ್ಡದಾರಿ ವ್ಯಕ್ತಿಯೊಬ್ಬರು ಹಲವು ಗಂಟೆಗಳ ಕಾಲ ಸುತ್ತಾಡುತಿದ್ದ ಎಂದು ಹೇಳಲಾಗಿದೆ .ಇದನ್ನು ಗಮನಿಸಿದ ಶಿಕ್ಷಣ ಸಂಸ್ಥೆಯವರು ಆರಂಭದಲ್ಲಿ ಮಕ್ಕಳ ಪೋಷಕರು ಆಗಿರಬಹುದೆಂದು ಯೋಚಿಸಿದ್ದರು. ಆತನ ಚಲನ ವಲನ ಗಮನಿಸಿ ಸಂಶಯಗೊಂಡು ಆತನ ಪೋಟೋ ಕ್ಲಿಕ್ಕಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಂದ ಓಡಿಹೋಗಿದ್ದಾನೆ ಎಂದು ತಿಳಿದು ಬಂದಿದೆ.ಮಕ್ಕಳ ಕಳ್ಳರ ಹಾವಳಿ ಇತ್ತಿಚಿಗಿನ ದಿನಗಳಲ್ಲಿ ಹೆಚ್ಚುತ್ತಿದ್ದು , ಇದೀಗ ಸುಳ್ಯದಲ್ಲಿಯೂ ಅನುಮಾನಾಸ್ಪದ ವ್ಯಕ್ತಿಯ ನಡೆ, ಶಿಕ್ಷಣ ಸಂಸ್ಥೆ ಮತ್ತು ಪೋಷಕರಲ್ಲಿ ಮತ್ತು ಸ್ಥಳೀಯರಿಗೆ ಆತಂಕ ಹುಟ್ಟುಹಾಕಿದೆ, ಈ ಬಗ್ಗೆ ಶಿಕ್ಷಣ ಸಂಸ್ಥೆಯವರು ಠಾಣೆಗೆ ಮೌಖಿಕ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ ಈ ರೀತಿಯ ಘಟನೆಯಿಂದ ತಾಲೋಕಿನ ಎಲ್ಲಾ ಶಿಕ್ಷಣ ಸಂಸ್ಥೆಯವರು ಪೋಷಕರು ಎಚ್ಚರದಿಂದ ಇರಬೇಕಾಗಿದೆ.

