ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್ ಶಾಕ್: ನ್ಯಾಯಾಲಯದ ವರ್ಗಾವಣೆ ಅರ್ಜಿ ವಜಾ
ನವದೆಹಲಿ/ಬೆಂಗಳೂರು (ಡಿ. 11): ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ವಿರುದ್ಧದ ಎರಡು ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ವಿಶೇಷ MP/MLA ನ್ಯಾಯಾಲಯದಿಂದ ನಗರದ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು (ಗುರುವಾರ) ತಿರಸ್ಕರಿಸಿದೆ. ನ್ಯಾಯಾಧೀಶರ ಮೇಲಿನ 'ಪಕ್ಷಪಾತದ' ಆರೋಪವನ್ನು ನ್ಯಾಯಾಲಯವು…



























