ಅಂತರಾಷ್ಟ್ರೀಯ

ದೆಹಲಿ ದೇಗುಲಗಳ ಮೇಲೆ ಉಗ್ರರ ಕಣ್ಣು: ಪಾಕ್ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕದಲ್ಲಿದ್ದ ಶಬ್ಬೀರ್ ಲೋನ್ ಜಾಲ ಪತ್ತೆ!
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ದೆಹಲಿ ದೇಗುಲಗಳ ಮೇಲೆ ಉಗ್ರರ ಕಣ್ಣು: ಪಾಕ್ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕದಲ್ಲಿದ್ದ ಶಬ್ಬೀರ್ ಲೋನ್ ಜಾಲ ಪತ್ತೆ!

​ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಭಯೋತ್ಪಾದಕ ಶಬ್ಬೀರ್ ಲೋನ್ ಮತ್ತು ಆತನ ತಂಡದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಭಯೋತ್ಪಾದಕ ಮಾಡ್ಯೂಲ್ ದೆಹಲಿಯ ಪ್ರಸಿದ್ಧ ದೇವಾಲಯಗಳು ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳ ಮೇಲೆ ನಿರಂತರವಾಗಿ ಕಣ್ಣಿಟ್ಟು, ಪರಿಶೀಲನೆ ನಡೆಸಿತ್ತು ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ. ​ ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ​ಬಂಧಿತ ಉಗ್ರ ಶಬ್ಬೀರ್ ಲೋನ್ ಪಾಕಿಸ್ತಾನ ಮೂಲದ ಉಗ್ರಗಾಮಿ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಗಡಿ ಆಚೆಯಿಂದ ಬರುವ ಸೂಚನೆಗಳ…

ರಾಜ್ಯ

ಧಾರ್ಮಿಕ

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ಚೈತ್ರ ಮಾಸದ ಆಗಮನ ಹಾಗೂ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಸಂದೇಶ ನೀಡಿರುವ ಅವರು, "ಯುಗಾದಿ, ಗುಡಿ ಪಾಡ್ವಾ, ಚೈತ್ರ ಶುಕ್ಲಾದಿ, ಉಗಾದಿ, ನವ್ರೇಹ್ ಮತ್ತು ಚೇತಿ ಚಂದ್ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.​ ಸಮೃದ್ಧಿಯ ಸಂಕೇತ:ಈ ಹಬ್ಬಗಳು ಭಾರತದ…

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಧಾರ್ಮಿಕ ರಾಷ್ಟ್ರೀಯ
ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು
ಅಪರಾಧ ಧಾರ್ಮಿಕ ರಾಷ್ಟ್ರೀಯ

ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಭರಣಗಳ ಕಳವು ಪ್ರಕರಣದಲ್ಲಿ ಬಂಧಿತರಾಗಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಮಾಜಿ ಅಧ್ಯಕ್ಷ ಎನ್. ವಾಸು ಅವರಿಗೆ 90 ದಿನಗಳ ಸುದೀರ್ಘ ಜೈಲು ವಾಸದ ನಂತರ ನ್ಯಾಯಾಲಯವು ಜಾಮೀನು ನೀಡಿದೆ. ಪ್ರಕರಣದ ಹಿನ್ನೆಲೆ:ಶಬರಿಮಲೆ ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಚಿನ್ನಾಭರಣಗಳ ದಾಸ್ತಾನು ಮತ್ತು ಲೆಕ್ಕಪತ್ರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ಎನ್.…

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!

ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮ ಪ್ರಶಸ್ತಿ'ಗಳನ್ನು ಕೇಂದ್ರ ಸರ್ಕಾರವು ಇಂದು ಗಣರಾಜ್ಯೋತ್ಸವದ ಪೂರ್ವಸಂಧ್ಯೆ ಘೋಷಿಸಿದೆ. ಈ ಬಾರಿ ಒಟ್ಟು 131 ಗಣ್ಯರಿಗೆ ಪ್ರಶಸ್ತಿ ಲಭಿಸಿದ್ದು, ಕರ್ನಾಟಕದ ಎಂಟು ಮಂದಿ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಬಾರಿ ಕರುನಾಡಿನ ಒಬ್ಬರಿಗೆ ಪದ್ಮಭೂಷಣ ಹಾಗೂ ಏಳು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಬಾರಿಯೂ ಕೇಂದ್ರ ಸರ್ಕಾರವು ಜನಸಾಮಾನ್ಯರಲ್ಲಿ ಗುರುತಿಸಿಕೊಳ್ಳದ 'ತೆರೆಮರೆಯ ಸಾಧಕರಿಗೆ' ಹೆಚ್ಚಿನ ಆದ್ಯತೆ ನೀಡಿದೆ.…

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!
ಆರೋಗ್ಯ ಮತ್ತು ಸೌಂದರ್ಯ ತಂತ್ರಜ್ಞಾನ ಧಾರ್ಮಿಕ ರಾಜ್ಯ ಶೈಕ್ಷಣಿಕ
​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!
ಧಾರ್ಮಿಕ ರಾಜ್ಯ

​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!

​ಉಡುಪಿ: ಕೃಷ್ಣನಗರಿ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಮಠದ ಆಡಳಿತ ಮಂಡಳಿಯು ಈಗ ಹೊಸ ವಸ್ತ್ರಸಂಹಿತೆಯನ್ನು (Dress Code) ಕಡ್ಡಾಯಗೊಳಿಸಿದೆ. ಪರ್ಯಾಯ ಶೀರೂರು ಮಠದ ನಿರ್ದೇಶನದಂತೆ ಜನವರಿ 19ರಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಮಠದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಹೊಸ ನಿಯಮಗಳೇನು?​ ಈ ಹಿಂದೆ ಶ್ರೀಕೃಷ್ಣ ಮಠದಲ್ಲಿ ಬೆಳಿಗ್ಗೆ 11 ಗಂಟೆಯೊಳಗೆ ನಡೆಯುವ ಮಹಾಪೂಜೆಯ ಸಮಯದಲ್ಲಿ ಮಾತ್ರ ಪುರುಷರು ಮೇಲಂಗಿ (ಶರ್ಟ್) ತೆಗೆದು ದರ್ಶನ…

ಕ್ರೀಡೆ

ಮನೋರಂಜನೆ

ನ.30ರಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸಾರ್ವಜನಿಕರ ಭೇಟಿಗೆ ಲಭ್ಯ
ರಾಜ್ಯ

ನ.30ರಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸಾರ್ವಜನಿಕರ ಭೇಟಿಗೆ ಲಭ್ಯ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ.30ರ ಶನಿವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ. ನಾಗರಿಕರು ತಮ್ಮ ಅಹವಾಲುಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ…

ಮಾವಿನಕಟ್ಟೆ   ಮರದಿಂದ ಬಿದ್ದು ವ್ಯಕ್ತಿ ಸಾವು
ರಾಜ್ಯ

ಮಾವಿನಕಟ್ಟೆ   ಮರದಿಂದ ಬಿದ್ದು ವ್ಯಕ್ತಿ ಸಾವು

ಸುಳ್ಯ : ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ  ಘಟನೆ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಬಳಿ ವರದಿಯಾಗಿದೆ.  ಮೃತಪಟ್ಟ ವ್ಯಕ್ತಿಯನ್ನು ಕೊಡಗಿನ ಸಿದ್ದಾಪುರ ಮೂಲದ ಕೃಷ್ಣ (55) ವರ್ಷ ಎಂದು  ಹೇಳಲಾಗಿದೆ.  ಸಂಬಂಧಿಕರ ಮನೆಗೆ ಕೆಲಸಕ್ಕೆಂದು ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.  ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸುಳ್ಯ ಸರ್ಕಾರಿ…

ಬಜಪೆ: ಹೆಜ್ಜೇನು ಕಡಿತದಿಂದ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕ ಸಾವು.
ರಾಜ್ಯ

ಬಜಪೆ: ಹೆಜ್ಜೇನು ಕಡಿತದಿಂದ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕ ಸಾವು.

ಬಜಪೆ: ಹೆಜ್ಜೇನು ಕಡಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕರೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ನ. 28ರಂದು ಕೊನೆಯುಸಿರೆಳೆದಿದ್ದಾರೆ. ಪೇಜಾವರ ಪಡ್ಡೋಡಿಯ ನಿವಾಸಿ, ದಿನಪತ್ರಿಕೆ ವಿತರಕ ಪುಷ್ಪಾರಾಜ ಶೆಟ್ಟಿ (45) ಮೃತ ದುರ್ದೈವಿ. ಪುಷ್ಪಾರಾಜ ಅವರು ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆಂಜಾರು ತಾಂಗಡಿಯಲ್ಲಿ ನ. 27ರ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ…

ಸುರತ್ಕಲ್ ಶ್ರೀನಿವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗೆ ರ‍್ಯಾಗಿಂಗ್ ಹಲ್ಲೆ , 10 ಮಂದಿ ಮೇಲೆ ಪ್ರಕರಣ ದಾಖಲು. 
ರಾಜ್ಯ

ಸುರತ್ಕಲ್ ಶ್ರೀನಿವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗೆ ರ‍್ಯಾಗಿಂಗ್ ಹಲ್ಲೆ , 10 ಮಂದಿ ಮೇಲೆ ಪ್ರಕರಣ ದಾಖಲು. 

ಸುರತ್ಕಲ್ : ಮಂಗಳೂರು ಹೊರವಲಯದ ಸುರತ್ಕಲ್ ಮುಕ್ಕ  ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್  ನಡೆದಿದೆ. ಕಾಲೀಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನಲ್ಲಿ ಮೊದಲನೇ ವರ್ಷದ ವೈದ್ಯಕೀಯ ಮನೋಶಾಸ್ತ್ರ ವ್ಯಾಸಂಗ ಮಾಡುತ್ತಿರುವ 19 ವರ್ಷದ…

ಕುಂಬಳೆ – ಬುರ್ಖಾ ಧರಿಸಿ ಮಹಿಳೆಯರ ಜೊತೆ ಕುಳಿತ ಯುವಕನಿಗೆ ಬಿತ್ತು ಧರ್ಮದೇಟು
ರಾಜ್ಯ

ಕುಂಬಳೆ – ಬುರ್ಖಾ ಧರಿಸಿ ಮಹಿಳೆಯರ ಜೊತೆ ಕುಳಿತ ಯುವಕನಿಗೆ ಬಿತ್ತು ಧರ್ಮದೇಟು

ಕುಂಬಳೆ ನವೆಂಬರ್ 29: ಬುರ್ಖಾ ಧರಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಮೀಪ ಕುಳಿತುಕೊಂಡಿದ್ದ ಯುವಕನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ. ಓರಿಸ್ಸಾ ಮೂಲದ ಯುವಕ ಮುಸ್ಲಿಂ ಯುವತಿಯರಂತೆ ಬುರ್ಖಾ ಧರಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಮೀಪ ಕುಳಿತಿದ್ದಾನೆ. ಈ ವೇಳೆ ಗಾಳಿಗೆ ಮುಖದ ಬಟ್ಟೆ…

ಮಂಗಳೂರು :132 ಜಿಲ್ಲಾಧಿಕಾರಿಗಳನ್ನು ಕಂಡ ದಕ್ಷಿಣ ಕನ್ನಡದ ಹಳೆ ಡಿಸಿ ಕಚೇರಿ ಕಟ್ಟಡದಲ್ಲಿ ನ.30 ರಿಂದ ಪಾರಂಪರಿಕ ಸಪ್ತಾಹ..!
ರಾಜ್ಯ

ಮಂಗಳೂರು :132 ಜಿಲ್ಲಾಧಿಕಾರಿಗಳನ್ನು ಕಂಡ ದಕ್ಷಿಣ ಕನ್ನಡದ ಹಳೆ ಡಿಸಿ ಕಚೇರಿ ಕಟ್ಟಡದಲ್ಲಿ ನ.30 ರಿಂದ ಪಾರಂಪರಿಕ ಸಪ್ತಾಹ..!

ಮಂಗಳೂರು: ಸರಿ ಸುಮಾರು ಒಂದೂವರೆ ಶತಮಾನದ ಇತಿಹಾಸವುಳ್ಳ ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದ ಆವರಣದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು  ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬ್ರಿಟೀಷರ ಕಾಲದಲ್ಲಿ ಕಲೆಕ್ಟರ್ ಆಫೀಸ್ ಎಂದೇ ಕರೆಯಲ್ಪಡುತ್ತಿದ್ದ ಈ ಕಟ್ಟಡವು ಒಂದು ಕಾಲದಲ್ಲಿ ದಕ್ಷಿಣ ಕನ್ನಡ,…

ಬೆಳ್ತಂಗಡಿ : ವೇಣೂರು ಚರ್ಚ್‌ ಕಾರ್ಯಕ್ರಮಕ್ಕೆ ಬಂದ ಮೂವರು ಯುವಕರು ನೀರಲ್ಲಿ ಮುಳುಗಿ ಮೃತ್ಯು..!
ರಾಜ್ಯ

ಬೆಳ್ತಂಗಡಿ : ವೇಣೂರು ಚರ್ಚ್‌ ಕಾರ್ಯಕ್ರಮಕ್ಕೆ ಬಂದ ಮೂವರು ಯುವಕರು ನೀರಲ್ಲಿ ಮುಳುಗಿ ಮೃತ್ಯು..!

ಬೆಳ್ತಂಗಡಿ:  ಮೂವರು ಯುವಕರು ದಕ್ಷಿಣ ಕನ್ನಡದ ಬೆಳ್ತಂಗಡಿಯ ವೇಣೂರಿನ ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ. ಮೂಡುಬಿದಿರೆಯ ಎಡಪದವು ಮೂಲದ ಲಾರೆನ್ಸ್(21),  ಬೆಳ್ತಂಗಡಿ ತಾಲೂಕಿನ ಪಾರೆಂಕಿಯ ಸೂರಜ್ (19) ಹಾಗೂ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಜೈಸನ್ (19) ಮೃತ…

ಸುಳ್ಯ ತಾಲೂಕು ಕಚೇರಿಗೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು..
ರಾಜ್ಯ

ಸುಳ್ಯ ತಾಲೂಕು ಕಚೇರಿಗೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು..

ಸುಳ್ಯ ತಾಲೋಕು ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನಪ್ಪಿರುವ ಬಗ್ಗೆ ವರದಿಯಾಗಿದೆ, ಸುಳ್ಯ ತಾಲೋಕು ಕಚೇರಿ ಪಡಸಾಲೆಯಲ್ಲಿಯೇ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ, ಅಡ್ಕಾರು ಮೂಲದ ಅಂದಾಜು(65) ವಯಸ್ಸಿನ ವ್ಯಕ್ತಿಯೆಂದು ಹೇಳಲಾಗಿದ್ದು ಅಂಬ್ಯುಲೆನ್ಸ್ ಮುಖಾಂತರ ತಾಲೋಕು ಆಸ್ಪತ್ರೆಗೆ ಒಯ್ಯಲಾಗಿದೆ.

ಕೊಕ್ಕೊ ಬೆಳೆಗಾರರಿಗೆ ಧರ ಏರಿಕೆಯ ಟಾನಿಕ್…! :100 ರಿಂದ 150 ಕ್ಕೆ ಜಿಗಿದ ಹಸಿ ಕೊಕ್ಕೋಧಾರಣೆ
ರಾಜ್ಯ

ಕೊಕ್ಕೊ ಬೆಳೆಗಾರರಿಗೆ ಧರ ಏರಿಕೆಯ ಟಾನಿಕ್…! :100 ರಿಂದ 150 ಕ್ಕೆ ಜಿಗಿದ ಹಸಿ ಕೊಕ್ಕೋಧಾರಣೆ

  ದಕ್ಷಿಣ ಕನ್ನಡ ಜಿಲ್ಲೆ: ಅಡಿಕೆ ಮತ್ತು ತೆಂಗು ಕೃಷಿಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯುವ ಕೊಕ್ಕೊ ಬೆಳೆಯ ಧಾರಣೆಯು ಮತ್ತೆ ಏರಿಕೆಯಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ದರವು ಪ್ರತಿ ಕೆ.ಜಿಗೆ 150 ಗಡಿ ದಾಟಿರುವುದು  ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬೇಡಿಕೆ ಹೆಚ್ಚಾಗಿರುವು ದರಿಂದ ಧಾರಣೆಯಲ್ಲಿ ಇನ್ನೂ…

ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆ ಸ್ಥಗಿತ: ಕಾರ್ಡ್ ಅಮಾನತು ತೆರವು; ಮುನಿಯಪ್ಪ
ರಾಜ್ಯ

ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆ ಸ್ಥಗಿತ: ಕಾರ್ಡ್ ಅಮಾನತು ತೆರವು; ಮುನಿಯಪ್ಪ

​ ಬೆಂಗಳೂರು: ಬಿಪಿಎಲ್​​ ಪಡಿತರ ಚೀಟಿಗಳ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇಡೀ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಮಾಹಿತಿ ನೀಡಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ‘ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI