ಈಶ್ವರಮಂಗಲದ ಯುವಕ ಬೆಂಗಳೂರಿನಲ್ಲಿ ನಾಪತ್ತೆ : ಮನೆಯವರಿಂದ ಪೋಲೀಸ್ ದೂರು
ಸುಳ್ಯ : ಈಶ್ವರಮಂಗಲದ ಯುವಕನೊಬ್ಬ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಆ.20ರಿಂದ ನಾಪತ್ತೆಯಾಗಿರುವುದಾಗಿ ಮನೆಯವರು ಬೆಂಗಳೂರು ಬೆಳ್ಳಂದೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ. ಈಶ್ವರಮಂಗಲದ ಶ್ರೀಕಾಂತ್ ಎಂಬವರು ಬೆಂಗಳೂರಿನಲ್ಲಿ ಚಿಕ್ಕ ಬೆಳ್ಳಂದೂರು ಕಾರ್ಮೆಲಾರಂ ರೈಲು ನಿಲ್ದಾಣ ಪಕ್ಕ ನಿಸರ್ಗ ಪಿ.ಜಿ ಯಲ್ಲಿದ್ದು, ಬೆಂಗಳೂರಿನಲ್ಲಿ ಟೆಕ್ನಿಕಲ್ ಆಗಿ ಕೆಲಸ ಮಾಡಿಕೊಂಡಿದ್ದು, ಆ.20ರಂದು…










