ಬಿಜೆಪಿಯ ಗೆಲುವಿನ ಮುನ್ಸೂಚನೆ ಅರಿತ ಕಾಂಗ್ರೆಸ್ ಅನೇಕ ಅಪಪ್ರಚಾರವನ್ನು ಮಾಡುತ್ತಿದೆ: ವೆಂಕಟ್ ದಂಬೆಕೋಡಿ.

ಬಿಜೆಪಿಯ ಗೆಲುವಿನ ಮುನ್ಸೂಚನೆ ಅರಿತ ಕಾಂಗ್ರೆಸ್ ಅನೇಕ ಅಪಪ್ರಚಾರವನ್ನು ಮಾಡುತ್ತಿದೆ: ವೆಂಕಟ್ ದಂಬೆಕೋಡಿ.


ಬಿಜೆಪಿಯ ಗೆಲುವಿನ ಮುನ್ಸೂಚನೆ ಅರಿತ ಕಾಂಗ್ರೆಸ್ ಅನೇಕ ಅಪಪ್ರಚಾರವನ್ನು ಮಾಡುತ್ತಿದೆ. ತಪ್ಪು
ಲೆಕ್ಕವನ್ನು ಜನರಿಗೆ ನೀಡಿ ದಾರಿ ತಪ್ಪಿಸುವ ಕೆಲಸ
ಮಾಡುತ್ತಿದೆ. ಇಂತಹ ಅಪಪ್ರಚಾರವನ್ನು ಜನ
ನಂಬುವುದಿಲ್ಲ. ಈಗ ಕ್ಷೇತ್ರ ತುಂಬಾ ಅಭಿವೃದ್ಧಿಯಾಗಿದೆ.
೩೦ ವರ್ಷಗಳ ಹಿಂದೆ ಅವರದೇ ಸರಕಾರ, ಇಲ್ಲಿಯೂ
ಅವರದೇ ಶಾಸಕರಿದ್ದರು. ಏನು ಅಭಿವೃದ್ಧಿ ಮಾಡಿದ್ದಾರೆ
ಎಂದು ಜನ ನೋಡಿದ್ದಾರೆ. ಕೋಟಿ ಅನುದಾನ ತಂದು
ಕಾಂಗ್ರೆಸ್ಸಿಗೆ ಗೊತ್ತೇ ಇರಲಿಲ್ಲ ಎಂದು ಹೇಳಿದರಲ್ಲದೆ,
ಧನಂಜಯ ಅಡ್ಪಂಗಾಯರು ಇಲ್ಲಿ ಕುಳಿತು ಬಳ್ಳ ಆದರ್ಶ..


ಗ್ರಾಮದಲ್ಲಿ ಏನಾಗಿದೆ ಎಂದು ಪ್ರಶ್ನಿಸುವುದಲ್ಲ.
ಅವರೊಮ್ಮೆ ಆ ಗ್ರಾಮದಲ್ಲಿ ಸುತ್ತಿ ಬರಲಿ, ಎರಡು ಗ್ರಾಮದ ಸಂಪರ್ಕ ರಸ್ತೆ, ಆಸ್ಪತ್ರೆ, ಶಾಲೆ ಎಲ್ಲವನ್ನು ನೋಡಿ ಮಾತನಾಡಲಿ ಎಂದು ಕಾಂಗ್ರೇಸ್ ವಿರುದ್ದ ಬಿಜೆಪಿ ಮಾಧ್ಯಮ ಉಸ್ತುವಾರಿ ವೆಂಕಟ್ ದಂಬೆಕೋಡಿ
ವಾಗ್ದಾಳಿ ನಡೆಸಿದ್ದಾರೆ..ಮೇ.6 ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಈ ಬಾರಿಯೂ ಬಿ ಜೆ ಪಿ 35000 ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಕಾಂಗ್ರೆಸ್ಸಿಗರು ತಪ್ಪು ಅಂಕಿ ಅಂಶಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ತಂತ್ರ ಮಾಡುತ್ತಿದ್ದಾರೆ.
ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ವಿವಿಧ ಯೋಜನೆಯಡಿಯಲ್ಲಿ ೫ ವರ್ಷದಲ್ಲಿ ೨ ಸಾವಿರದ ೧೫ ಕೋಟಿ ರೂ ಅನುದಾನ ಬಂದಿದೆ. ಇದನ್ನೆಲ್ಲ ಕ್ಷೇತ್ರದ ಮತದಾರ ಗಮನಿಸುತ್ತಿದ್ದು ಚುನಾವಣೆಯಲ್ಲಿ ಸುಮಾರು ೩೫ ಸಾವಿರ ಅಂತರದಿಂದ ನಮ್ಮ ಅಭ್ಯರ್ಥಿ ವಿಜಯ ಸಾದಿಸಲಿದ್ದಾರೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಜನ ಪರವಾದ ಆಡಳಿತವನ್ನು ಜನರು ಮೆಚ್ಚಿಕೊಂಡು ಮತ್ತೊಮ್ಮೆ ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಂಕಲ್ಪ ಕೈಗೊಂಡಿದ್ದಾರೆ. ಈಗಾಗಲೇ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭ, ಬಳಿಕ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ಕಾರ್ಯಕ್ರಮ ಯಶಸ್ವಿಯಾಗಿದೆ. ಈಗಾಗಲೇ ೨೩೧ ಬೂತ್‌ಗಳಲ್ಲಿಯೂ ಮನೆ ಮನೆ ಭೇಟಿ ನಡೆಸಲಾಗಿದೆ.
೨ನೇ ಹಂತದ ಮನೆ ಭೇಟಿ ನಡೆಯುತ್ತಿದೆ. ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಪರ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದ್ದು, ಕಾಂಗ್ರೆಸ್ ಇದನ್ನು ಸಹಿಸಲಾಗದೆ ಜನರನ್ನು ದಾರಿತಪ್ಪಿಸುವ ತಂತ್ರಕ್ಕೆ ಮುಂದಾಗಿದೆ ಎಂದು ಅವರು ಹೇಳಿದರು.೫ ವರ್ಷದಲ್ಲಿ ೨ ಸಾವಿರದ ೧೫ ಕೋಟಿ ಅನುದಾನ ಕ್ಷೇತ್ರಕ್ಕೆ ಬಂದಿದೆ. ಪಿಡಬ್ಲ್ಯೂಡಿ, ಸಣ್ಣ ನೀರಾವರಿ, ಜಿ.ಪಂ., ಜಲಜೀವನ್, ಪಿಎಂ.ಜಿಎಸ್ ವೈ ಹೀಗೆ ವಿವಿಧ ಯೋಜನೆಯ ಅನುದಾನಗಳಿವೆ. ಪರೋಕ್ಷವಾಗಿ ಬಂದ ಅನುದಾನ ಬೇರೆಯೇ ಇದೆ. ಇದನ್ನು ಮರೆ ಮಾಚಿ ಜನರಿಗೆ ತಪ್ಪು
ಸಂದೇಶವನ್ನು ಕಾಂಗ್ರೆಸ್ ನೀಡುತ್ತಿದೆ. ೧೯೯೪ ಹಿಂದೆ ಕ್ಷೇತ್ರ ಹೇಗಿತ್ತು ಎನ್ನುವುದನ್ನು ಅವಲೋಕನ ಮಾಡಬೇಕು. ಈಗ ಕ್ಷೇತ್ರದ ಪ್ರತೀ ರಸ್ತೆಗಳು ಅಭಿವೃದ್ಧಿಗೊಂಡಿದೆ. ಸುಳ್ಯ ಕನಮಜಲು, ಸಂಪಾಜೆ, ಸುಬ್ರಹ್ಮಣ್ಯ, ನಿಂತಿಕಲ್ಲು, ರಾಮಕುಂಜ, ಗೋಳಿತೊಟ್ಟು, ನೆಲ್ಯಾಡಿ ಹೀಗೆ ಎಲ್ಲ ರಸ್ತೆಗಳು ಅಭಿವೃದ್ಧಿಗೊಂಡಿದೆ. ಕೆಲವೊಂದು ರಸ್ತೆಗಳು ಪ್ರಗತಿಯಲ್ಲಿದೆ.
ಈ ಎಲ್ಲ ಅಭಿವೃದ್ಧಿಯನ್ನು ಜನರು ನೋಡುತ್ತಿದ್ದಾರೆ. ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡುವುದಿಲ್ಲ ಈ ಬಾರಿ ಬಿಜೆಪಿ ಸರಕಾರ ಬಂದ ತಕ್ಷಣ ಈಭಾಗದ ಅಡಿಕೆ ಎಲೆ ಹಳದಿ ರೋಗ ಹಾಗೂ ಎಲೆ ಚುಕ್ಕೆ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.


ಕಾಂಗ್ರೆಸ್ ನಿಂದ ನೈತಿಕ ದಿವಾಳಿತನ : ಬಿಜೆಪಿ ಇದೇ ಕ್ಷೇತ್ರದಲ್ಲಿ ಜಿ.ಪಂ., ತಾ.ಪಂ. ನಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿ, ಪ್ರಾಮಾಣಿಕ ವಾಗಿರು ಕು.ಭಾಗೀರಥಿಯವರಿಗೆ ಬಿಜೆಪಿ ಅವಕಾಶ ನೀಡಿದೆ. ಆದರೆ ಕಾಂಗ್ರೆಸ್ ನಲ್ಲಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳಿದ್ದರೂ ಹೊರಗಿನಿಂದ ಉದ್ಯಮಿಯೊಬ್ಬರನ್ನು ತಂದು ಇಲ್ಲಿ ಅವಕಾಶ
ನೀಡಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯ ಪಾಲಿಸಿಲ್ಲ. ಇದರಿಂದ ಕಾಂಗ್ರೆಸ್ ನೈತಿಕ ದಿವಾಳಿತನವಾಗಿದೆ. ಆ ಅಭ್ಯರ್ಥಿಯನ್ನು ಅವರ ಪಕ್ಷದ ಕಾರ್ಯಕರ್ತರೇ ಒಪ್ಪುತ್ತಿಲ್ಲ ಎಂದು ಅವರು ಹೇಳಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಸುಳ್ಯ ನಗರದ ಸಮಗ್ರ ಶುದ್ಧ ಕುಡಿಯುವ
ನೀರಿನ ಯೋಜನೆಗೆ ೬೫ ಕೋಟಿ ರೂ ಸರಕಾರ ಕೊಟ್ಟಿದೆ.
೧೧೦ ಕೆ.ವಿ. ಕೆಲಸ ಆಗ್ತ ಇದೆ. ಅಂಬೇಡ್ಕರ್ ಭವನ ಕಾಮಗಾರಿ ಪ್ರಗತಿಯಲ್ಲಿದೆ. ಸುಳ್ಯದ ಸಮುದಾಯ ಆರೋಗ್ಯ ಕೇಂದ್ರ ಸುಸಜ್ಜಿತವಾಗಿದೆ ಇದೆಲ್ಲ ಆಗಿರುವಾಗ ಕಾಂಗ್ರೆಸ್ಸಿಗರು ಮಾಡುತ್ತೇವೆ ಎಂದು ಹೇಳೋದೇನು? ನಾವು ಮಾಡಿದ ಕೆಲಸಕ್ಕೆ ಅವರು ಬೆನ್ನುತಟ್ಟಿಕೊಳ್ಳುವುದು ಬೇಡ. ಕೊಡಿಯಾಲ
ಬೈಲು ರಸ್ತೆ ಕಾಮಗಾರಿ ಮಾಡಲು ನಾವು ಬದ್ಧರಿದ್ದೇವೆ. ಅಲ್ಲಿಸುಸಜ್ಜಿತ ಕಾಲೇಜು ಮಾಡಿದ್ದು ನಮ್ಮ ಶಾಸಕರು. ಬಿಸಿಎಂ ಇಲಾಖೆ ಯೂ ಮಾಡಿದ್ದು ನಮ್ಮದೇ ಶಾಸಕರು. ದೂರ ದೃಷ್ಠಿ ಇಟ್ಟು ಕೆಲಸ ಮಾಡಲಾಗಿದ್ದು ಅಲ್ಲಿಯ ರಸ್ತೆಯೂ ಅಭಿವೃದ್ಧಿ ಆಗುತ್ತದೆ. ಪೆರುವಾಜೆ ಕಾಲೇಜು ಆರಂಭದಲ್ಲಿ ಹೇಗಿತ್ತು ಈಗ ಹೇಗೆ ಆಗಿದೆ ಎನ್ನುವುದನ್ನು ನೋಡಲಿ ಎಂದು ಹೇಳಿದರು. ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ದುಡ್ಡು ನೀಡಿ ಚುನಾವಣೆ ಎದುರಿಸುತ್ತಿದೆ. ನಮ್ಮದು ಅಭಿವೃದ್ಧಿ
ಮಾತ್ರ ಎಂದು ಹೇಳಿದರಲ್ಲದೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ವನ್ನು ನಿಷೇಧ ಮಾಡುವುದಾಗಿ ಹೇಳಿದೆ. ಅದೊಂದು ದೇಶ ಭಕ್ತರ ಸಂಘಟನೆ. ಈ ಬಾರಿಯ ಚುನಾವಣೆಯಲ್ಲಿ ಅದಕ್ಕೆ ಉತ್ತರ ಸಿಗಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಹರೀಶ್ ಬೂಡುಪನ್ನೆ ಇದ್ದರು.

ರಾಜ್ಯ