ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೊರುವ ಹಿನ್ನಲೆ.ಪಯಸ್ವಿನಿ ನದಿ ಬದಿಯ ತೋಟಗಳ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತಕ್ಕೆ ಅಧಿಕಾರಿಗಳಿಂದ ಆದೇಶ.

ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೊರುವ ಹಿನ್ನಲೆ.
ಪಯಸ್ವಿನಿ ನದಿ ಬದಿಯ ತೋಟಗಳ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತಕ್ಕೆ ಅಧಿಕಾರಿಗಳಿಂದ ಆದೇಶ.

ಬರಿದಾಯ್ತು ಪಯಸ್ವಿನಿ ಒಡಲು:
ವಾರ ಕಳೆದರೆ ಸುಳ್ಯ ನಗರ ವಾಸಿಗಳಿಗೆ ಕುಡಿಯಲು ನೀರಿಲ್ಲ …!ಪಯಸ್ವಿನಿ ನದಿ ತಟದ ತೋಟಗಳ ಕೃಷಿ ಪಂಪ್ ಗಳ ವಿದ್ಯುತ್ ಕಡಿತವೊಂದೇ ಸಧ್ಯದ ಪರಿಹಾರ…?
ಸುಳ್ಯನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಅಂಶವನ್ನು ಗಮನಿಸಿ
ಈ ಬಗ್ಗೆ ನಿನ್ಬೆಯಷ್ಟೆ ನಿಮ್ಮ ನ್ಯೂಸ್ ರೂಮ್ ಫಸ್ಟ್ ವರದಿ ಮಾಡಿತ್ತು ಇದೀಗ ನಗರವಾಸಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಮತ್ತು ಈ ಬಗ್ಗೆ ನಗರ ಪಂಚಾಯತ್ ಮುಖ್ಯಾಧಿಕಾರಿಗಳು ಆತಂಕವನ್ನು ವ್ಯಕ್ತಪಡಿಸಿದ್ದರು.ಇದನ್ನು ಗಮನ ಹರಿಸಿ ಸುಳ್ಯ ನಗರಕ್ಕೆ ಕುಡಿಯವ ನೀರಿನ ಅಭಾವ ಕಾಡದಂತೆ ಸುಳ್ಯ ಕಲ್ಲು ಮುಟ್ಲು ಪಂಪ್ ಹೌಸ್ ನಿಂದ ಮೇಲೆ ನದಿ ಅಕ್ಕ ಪಕ್ಕದ ತೋಟಗಳ ಕೃಷಿ ಪಂಪ್ ಗಳ ವಿದ್ಯುತ್ ನಿಲುಗಡೆಗೆ ಸುಳ್ಯ ತಹಶೀಲ್ದಾರ್ ಮಂಜುನಾಥ್ ಸುಳ್ಯ ಮೆಸ್ಕಾಂ ಅಧಿಕಾರಿಗಳಿಗೆ ಆದೇಶವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ