
ಸುಳ್ಯ: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೃಜನ್ ವರ್ಗಾವಣೆಗೊಳಿಸಿ ಆದೇಶವನ್ನು ಇಲಾಖೆ ಹೋರಡಿಸಿದ್ದು ಈ ಕ್ರಮದ ವಿರುದ್ದ ಗ್ರಾಮ ಪಂಚಾಯತ್ ವಿಪಕ್ಷ ಸದಸ್ಯರು ಸುಳ್ಯ ತಾಲೂಕು ಪಂಚಾಯತ್ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ ಈ ಸಂದರ್ಭದಲ್ಲಿ ಮಾತನಾಡಿದ ಪ್ರತಭಟನಾಕಾರರು
ಒತ್ತಡಗಳಿಗೆ ಮಣಿಯದೇ ಇರುವ ಕಾರಣ ಇವರ ವಿರುದ್ದ ಸುಳ್ಳು ದೂರುಗಳನ್ನು ನೀಡಿ ವರ್ಗಾವಣೆ ಮಾಡಲಾಗಿದೆ ಇವರ ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲಾ ದೂರು ಅರ್ಜಿಗಳು ಬಂದ ಕೂಡಲೇ ಅದನ್ನು ಪರಾಮರ್ಶೆ ಮಾಡಿ ಕ್ರಮ ಜರುಗಿಸಬೇಕಿತ್ತು .



ಗ್ರಾಮದ ಜನತೆಯ ಹಿತದೃಷ್ಟಿಯಿಂದ ಬೆಳಗ್ಗೆ 8 ಗಂಟೆಯಿಂದಲೇ ಕಛೇರಿಗೆ ಆಗಮಿಸಿ ಕೆಲಸಗಳನ್ನು ಮಾಡುತ್ತಿದ್ದು ಸಿಬ್ಬಂದಿ ಕೊರತೆಯನ್ನು ಜನತೆಗೆ ಅರಿವಾಗದ ರೀತಿಯಲ್ಲಿ ತಾವೇ ಖುದ್ದಾಗಿ ಎಲ್ಲಾ ಕೆಲಸಗಳನ್ನು ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತಿದ್ದರು ಇಂತಹ ಅಧಿಕಾರಿಯ ವರ್ಗಾವಣೆ ಹಿಂದೆ ರಾಜಕೀಯ ದುರುದ್ದೇಶ ಹೊಂದಿದೆ ಎಂದು ಆಕ್ರೋಶ ವ್ಯಕಪಡಿಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಅಡಿಂಜ ಚಂದ್ರಕಾಂತ ನಾರ್ಕೊಡು ಧರ್ಮಪಾಲ ಕೊಯಿಂಗಾಜೆ
ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಕೋಲ್ಚಾರು ಹಾಗು ಮೀನಾಕ್ಷಿ ಕುಡೆಕಲ್ಲು ಮುತ್ತಪ್ಪ ಪೂಜಾರಿ ಮೊಲಾದವರಿದ್ದರು.

ಸ್ಥಳಕ್ಕೆ ಬಂದ ಇ ಒ: ಭರವಸೆ ಹಿನ್ನಲೆ ಪ್ರತಿಭಟನೆ ವಾಪಸ್
ಪ್ರತಿಭಟನೆ ಹಿನ್ನಲೆ ಸ್ಥಳಕ್ಕೆ ಬಂದ.ಇಒ ಭವಾನಿಶಂಕರರು ಸಿಇಒ ನಮ್ಮ ಬಳಿಯಿಂದ ವರದಿ ಕೇಳಿದ್ದರು ಇಲಾಖೆಯ ಪ್ರಕಾರ ನಾವು ವರದಿ ನೀಡಿದ್ದೇವೆ. ಅಷ್ಟೇ ವರ್ಗಾವಣೆ ಎಲ್ಲಾ ಆಗುವುದು ಹಿರಿಯ ಅಧಿಕಾರಿಗಳ ಆದೇಶದ ಪ್ರಕಾರ ಮತ್ತು ನಿಮ್ಮ ಮನವಿಯನ್ನು ನಾನು ಸಿಇಒರವರ ಗಮನಕ್ಕೆ ತರುತ್ತೇನೆ ಎಂದು ಪ್ರತಿಭಟನ ನಿರತ ಗ್ರಾಮ ಪಂಚಾಯತ್ ಸದಸ್ಯರಿಗೆ ತಿಳಿಸಿದರು .ಎರಡು ದಿನದ ಕಾಲ ಮಿತಿಯಲ್ಲಿ ವರ್ಗಾವಣೆ ರದ್ದಾಗುವಂತೆ ಮನವಿ ನೀಡಿದ ಪ್ರತಭಟನಾಕಾರರು ಪ್ರತಿಭಟನೆ ಹಿಂತೆಗೆದು ಕೊಂಡರೆಂದು ತಿಳಿದು ಬಂದಿದೆ.
