
ವಿಟ್ಲ: ಬೋರ್ ವೆಲ್ ಲಾರಿ ಮತ್ತು ದ್ವಿಚಕ್ರ
ವಾಹನಗಳ ನಡುವೆ ಭೀಕರ ಅಪಘಾತ
ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟ
ಘಟನೆ ವಿಟ್ಲದ ಕಾಶಿಮಠದಲ್ಲಿ ನಡೆದಿದೆ.
ಘಟನೆಯಲ್ಲಿ ಉಕ್ಕುಡ ಆಲಂಗಾರು ನಿವಾಸಿ
ರಂಜಿತ್ ಮೃತಪಟ್ಟವರು.ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಬೋರ್ ವೆಲ್ ಲಾರಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ
ಅಪಾಯದಿಂದ ಪಾರಾಗಿದ್ದಾರೆ.


