
ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾಜಿ ಸಂಸತ್ ಸದಸ್ಯರಾದ ಆರ್. ದ್ರುವನಾರಾಯಣರವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಹೆಗ್ಗಡನವಾಡಿ ಯ ಅವರ ತೋಟದ ಮನೆಯಲ್ಲಿ ಸಕಲ ಸರಕಾರಿ ಮರ್ಯಾದೆಯೊಂದಿಗೆ ನಡೆಯಿತು, ಅಂತ್ಯಕ್ರಿಯೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಕಾರ್ಯಧ್ಯಕ್ಷರುಗಳಾದ ಸಲೀಂ ಅಹಮದ್ ಸತೀಶ್ ಜಾರಕಿಹೊಳಿ ಈಶ್ವರ್ ಖಂಡ್ರೆ, ಡಿ ಕೆ ಸುರೇಶ್ ಎಂ ಪಿ, ಕೆ ಹೆಚ್ ಮುನಿಯಪ್ಪ,ದಿನೇಶ್ ಗುಂಡೂರಾವ್, ಎ ಐ ಸಿ ಸಿ ಕಾರ್ಯದರ್ಶಿ ರೋಜಿ ಎಂ ಜಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪ ಅಮರನಾಥ್ ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್, ಎನ್ ಎಸ್ ಯು ಐ ಅಧ್ಯಕ್ಷರಾದ ಕೀರ್ತಿ ಗಣೇಶ್,ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ಧಿಕ್ ಕೊಕೊ ಸಹಿತ ಕಾಂಗ್ರೆಸ್ ನ ಹಲವು ಹಿರಿಯ ಕಿರಿಯ ನಾಯಕರು ಉಪಸ್ಥಿತರಿದ್ದರು,ಕಾರ್ಯಕರ್ತರ ಆಕ್ರಂದನ ಮುಗಿಲುಮುಟ್ಟುತಿತ್ತು ಟಿ ಎಂ ಶಾಹಿದ್ ತೆಕ್ಕಿಲ್ ಕುಟುಂಬದ ಸದಸ್ಯರ ಭೇಟಿ ಮಾಡಿ ಸಾಂತ್ವಾನ ತಿಳಿಸಿದರು ಅವರ ಪುತ್ರ ದರ್ಶನರವರೀಗೆ ಸಂತಾಪ ತಿಳಿಸುವ ಸಂದರ್ಭದಲ್ಲಿ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ ಧರ್ಶನ್ ಅವರಿಗೆ ಟಿಕೆಟ್ ನೀಡುವಂತೆ ಘೋಷಣೆ ಕೂಗುತ್ತಿದ್ಧರು.



