
ಕಡಬ ತಾಲೂಕಿನ ರಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ
ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ
ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52ವ ಮೃತಪಟ್ಟಿದ್ದರು. ನರಹಂತಕ ಆನೆಯನ್ನು ಸೆರೆ ಹಿಡಿಯಲು ನಿನ್ನೆ ರಾತ್ರಿಯೇಮೈಸೂರು ದುಬಾರೆಯಿಂದ 5 ಆನೆಗಳನ್ನು ತರಲಾಗಿದ್ದು.ಫೆ.21 ರಂದು ಡೋನ್ ಕ್ಯಾಮರಾ ಬಳಸಿ ನರಹಂತಕ ಆನೆಯನ್ನು ಪತ್ತೆ ಹಚ್ಚಿದುಬಾರೆಯ ಆನೆಗಳು ಮೂಲಕ ಸೆರೆಹಿಡಿಯುವ ಕಾರ್ಯಾಚರಣೆಯು ರೆಂಜಲಾಡಿ ಗ್ರಾಮದ ತುಂಬೆ ರಕ್ಷಿತಾರಣ್ಯದಲ್ಲಿ ಆರಂಭವಾಗಿದೆ.ಈ ವೇಳೆ ಉಪ ಅರಣ್ಯ
ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ವೈ ಕೆ, ಎಸಿಎಫ್ ಪ್ರವೀಣ್ ಕುಮಾರ್, ಪಂಜ ಆರ್ ಎಫ್ ಒ ಮಂಜುನಾಥ, ಸುಬ್ರಹ್ಮಣ್ಯ ಆರ್ ಎಫ್ ಓ ರಾಘವೇಂದ್ರ, ಸುಳ್ಯ ಆರ್ ಎಫ್ ಓ ಗಿರೀಶ್, ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಾರ್ಯಾಚರಣೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳೀಯರು ಸಹಕರಿಸುತ್ತಿದ್ದಾರೆ.

