ಇನ್ಮುಂದೆ ಸಿಗರೇಟ್‌ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟಕ್ಕೆ ಪರವಾನಿಗೆ ಕಡ್ಡಾಯ.

ಮಂಗಳೂರು: ಸಿಗರೇಟ್‌ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಇನ್ಮುಂದೆ ಪರವಾನಿಗೆ ಕಡ್ಡಾಯ ವಾಗಲಿದ್ದು, ಬೇಕಾಬಿಟ್ಟಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಬೀಳಲಿದೆ.
ತಂಬಾಕು ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗಿರುವುದರಿಂದ ಮತ್ತು ಇಂತಹ ಉತ್ಪನ್ನಗಳು ಯುವಜನತೆ ಸೇರಿದಂತೆ ಸಾರ್ವಜನಿಕರ ಕೈಗೆ ಸುಲಭವಾಗಿ ದೊರೆಯುತ್ತಿರುವುದರಿಂದ ಇದರ ನಿಯಂತ್ರಣಕ್ಕೆ ಅಬಕಾರಿ ಮಾದರಿಯಲ್ಲಿ ಪರವಾನಿಗೆ ಕಡ್ಡಾಯ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ಪರವಾನಿಗೆ ಕಡ್ಡಾಯವಾಗಲಿದೆ.
ಕೋಟಾ ತಂಡವು ನಿಯಮ ಉಲ್ಲಂಘಿಸುವ ಅಂಗಡಿ ಮಾಲಕರಿಗೆ, ಸಾರ್ವಜನಿಕವಾಗಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುತ್ತಿದೆ. ಆದರೆ ದಂಡ ಪಾವತಿಸಿ ಮತ್ತೆ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 2021-22ರಲ್ಲಿ 45 ಕಡೆ ದಾಳಿ ನಡೆಸಿ 96,250 ರೂ., 2022-23ರಲ್ಲಿ ಇದುವರೆಗೆ 54 ಪ್ರಕರಣಗಳಲ್ಲಿ 1,29,350 ರೂ. ದಂಡ ವಸೂಲಿ ಮಾಡಲಾಗಿದೆ. ದ.ಕ ಜಿಲ್ಲೆಯಲ್ಲಿ 2021-22ರಲ್ಲಿ 904 ಪ್ರಕರಣಗಳಲ್ಲಿ 1,42,160 ರೂ. ಹಾಗೂ 2022-23ರಲ್ಲಿ ಇದುವರೆಗೆ 800 ಪ್ರಕರಣಗಳಲ್ಲಿ 1,17,920 ರೂ. ದಂಡ ವಸೂಲಿ ಮಾಡಲಾಗಿದೆ.

ರಾಜ್ಯ